ಸೋಮವಾರಪೇಟೆ, ಡಿ.೧: ಕೊಡಗು ಜಿಲ್ಲಾ ಬಹುಜನ ಸಮಾಜವಾದಿ ಪಕ್ಷದ ವತಿಯಿಂದ ತಾ. ೬ರಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೬೫ನೇ ಪರಿನಿಬ್ಬಾಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪಕ್ಷದ ಉಸ್ತುವಾರಿ ಜಯಪ್ಪ ಹಾನಗಲ್ಲು ತಿಳಿಸಿದ್ದಾರೆ.
ಪಟ್ಟಣದ ಪತ್ರಿಕಾಭವನದಲ್ಲಿ ತಾ.೬ರಂದು ಬೆಳಿಗ್ಗೆ ೧೧ಕ್ಕೆ ನಡೆಯುವ ಕಾರ್ಯಕ್ರಮವನ್ನು ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮಾವತಿ ಆನಂದ ಉದ್ಘಾಟಿಸಲಿದ್ದಾರೆ. ನಿವೃತ್ತ ಐಎಫ್ಎಸ್ ಅಧಿಕಾರಿ ಸಿದ್ದಪ್ಪ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಪಕ್ಷದ ಜಿಲ್ಲಾ ಸಂಯೋಜಕ ಮಹಮ್ಮದ್ ಕುಂಞ, ಜಿಲ್ಲಾ ಸಮಿತಿಯ ಎಚ್.ಕೆ. ಮೊಣ್ಣಪ್ಪ, ಎ.ಎಸ್. ಜೋಯಪ್ಪ ಹಾಗೂ ಬಿ.ಎಸ್. ಚನ್ನಬಸವಯ್ಯ ಭಾಗವಹಿಸಲಿದ್ದಾರೆ.