ಮಡಿಕೇರಿ, ಡಿ.೧: ಜೈಪುರದಲ್ಲಿ ಇತ್ತೀಚೆಗೆ ನಡೆದಿದ್ದ ಮಿಸೆಸ್ ವರ್ಲ್ಡ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಸಾಧನೆ ಮಾಡಿರುವ ಜಿಲ್ಲೆಯವರಾದ ಬಾಳಾಜಿ ಗ್ರಾಮದ ಕೊಣಿಯಂಡ ಕಾವ್ಯ ಸಂಜು ಅವರನ್ನು ಮಡಿಕೇರಿಯ ಸಂತ ಜೋಸೆಫರ ಶಾಲಾ ಹಳೆಯ ವಿದ್ಯಾರ್ಥಿಗಳ ಸಂಘದಿAದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷೆ ಚೆಕ್ಕೇರ ಶಶಿ ಉತ್ತಪ್ಪ, ಉಪಾಧ್ಯಕ್ಷೆ ಕಳ್ಳಿಚಂಡ ಅಕ್ಕಮ್ಮ, ಕಾರ್ಯದರ್ಶಿ ಮೂಕಚಂಡ ಬೊಳ್ಳಮ್ಮ, ಖಜಾಂಚಿ ಇಟ್ಟೀರ ಗಂಗಮ್ಮ ಸೇರಿದಂತೆ ಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದದವರು ಪಾಲ್ಗೊಂಡಿದ್ದರು.