ನಮ್ಮಲ್ಲಿ ಬಹುತೇಕರಿಗೆ ಆಸ್ತಿಪಾಸ್ತಿಗಳಿವೆ. ಇವುಗಳಲ್ಲಿ ಕೆಲವು ಸ್ವಯಾರ್ಜಿತ. ಕೆಲವು ಪಿತ್ರಾರ್ಜಿತ. ಕೆಲವರು ತಮ್ಮ ಅಮೂಲ್ಯ ಕೃಷಿ ಯೋಗ್ಯ ಜಮೀನನ್ನು ಪಾಳು ಬಿಟ್ಟಿದ್ದಾರೆ. ಹಲವರು ಇವುಗಳಿಗೆ ಹಲವಾರು ನೆಪಗಳನ್ನು ಹೇಳುತ್ತಾರೆ. ಇವುಗಳಲ್ಲಿ ಬಹುತೇಕ ಜಮೀನಿಗೆ ಹಲವರು ದಶಕಗಳಿಂದ ಕಂದಾಯವನ್ನೇ ಪಾವತಿಸುತ್ತಿಲ್ಲ. ಇದರ ಪರಿಣಾಮ ಸರಕಾರಿ ಬೊಕ್ಕಸಕ್ಕೆ ಪ್ರತೀ ವರ್ಷವೂ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ