ಮಡಿಕೇರಿ, ಡಿ. ೧: ೨೦೨೦-೨೧ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ನಡೆಯಲಿದೆ.

ಸಹ ಶಿಕ್ಷಕರು (ಕ್ರ.ಸಂ ೧ ರಿಂದ ೪೩) ಮತ್ತು ದೈಹಿಕ ಶಿಕ್ಷಕರು (ಕ್ರ.ಸಂ. ೧ ರಿಂದ ೩) ಕೋರಿಕೆ ವರ್ಗಾವಣೆಗಳ ಗಣಕೀಕೃತ ಕೌನ್ಸಿಲಿಂಗ್ ಡಿಸೆಂಬರ್ ೨ ರಂದು ಹಾಗೂ ಪ್ರೌಢಶಾಲಾ ಸಹ ಶಿಕ್ಷಕರ ವೃಂದದ ನಿರ್ದಿಷ್ಟ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರ ಕೌನ್ಸಿಲಿಂಗ್ ೩ ರಿಂದ ೫ ವರ್ಷಗಳು (ಕ್ರ.ಸಂ. ೧ ರಿಂದ ೫) ಡಿಸೆಂಬರ್ ೬ ರಂದು ಮತ್ತು ಪ್ರೌಢಶಾಲಾ ಸಹ ಶಿಕ್ಷಕರ ಪರಸ್ಪರ ವರ್ಗಾವಣೆಗಳ ಗಣಕೀಕೃತ ಕೌನ್ಸಿಲಿಂಗ್ (ಕ್ರ.ಸಂ. ೧) ಡಿಸೆಂಬರ್ ೯ ರಂದು ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೇದಮೂರ್ತಿ ಅವರು ತಿಳಿಸಿದ್ದಾರೆ.