ಸುಂಟಿಕೊಪ್ಪ, ನ. ೩೦: ಮೊದಲನೆ ಬಾರಿಗೆ ಜನ್ಮ ನೀಡಿದ ಆನೆ, ತೋಡಿನಿಂದ ರಕ್ಷಿಸಲ್ಪಟ್ಟ ತನ್ನ ಕಂದಮ್ಮನನ್ನು ಮತ್ತೆ ಅಲ್ಲಿಗೇ ಎಸೆದ ಪರಿಣಾಮ, ಮರಿಯಾನೆಯೊಂದು ಹುಟ್ಟಿದ ಕೆಲವು ಗಂಟೆಗಳಲ್ಲಿಯೇ ಬದುಕುಳಿಯಲು ಅಸಾಧ್ಯವಾಯಿತು. ಇದು ಏಳನೇ ಹೊಸಕೋಟೆ ಸಮೀಪದ ತೊಂಡೂರು ಬಳಿ ನಡೆದ ಘಟನೆ.

ಸೋಮವಾರ ತಡರಾತ್ರಿ ತ್ರಾಣರಹಿತ ಗರ್ಭಿಣಿ ಆನೆ ತೊಂಡೂರು ಬಳಿಯ ಖಾಸಗಿ ತೋಟದಲ್ಲಿನ ತೋಡಿನಲ್ಲಿಯೇ ತನ್ನ ಮರಿಗೆ ಜನ್ಮ ನೀಡಿತ್ತು. ಇಂದು ಬೆಳಿಗ್ಗೆ ತೋಡಿನಿಂದ ಹೊರಬರಲು ಸಾಧ್ಯವಾಗದ ಮರಿಯಾನೆಯ ನರಳಾಟವನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಅರಣ್ಯ ಇಲಾಖೆಯ ಗಮನಕ್ಕೆ ತಂದರು. ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್ ಸೇರಿದಂತೆ ಇಲಾಖಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಮರಿಯಾನೆ ತೋಡಿನಲ್ಲಿ ಬಹಳ ಹೊತ್ತು ಇದ್ದರೆ, ಅಪಾಯ ಖಂಡಿತ ಎಂದು ಅರಿತ ಇಲಾಖಾ ಸಿಬ್ಬಂದಿ ಕಂದಮ್ಮನ ಬಳಿಯೇ ಇದ್ದ ತಾಯಾನೆಯನ್ನು ಅಲ್ಲಿಂದ ಓಡಿಸುವ ಪ್ರಯತ್ನಕ್ಕೆ ಮುಂದಾದರು. ಪಟಾಕಿ ಹಾಗೂ ಸಾಕಾನೆಗಳಾದ ಕೃಷ್ಣ ಹಾಗೂ ವಿಜಯ ಸಹಾಯದಿಂದ ತಾಯಾನೆಯನ್ನು ಅಲ್ಲಿಂದ ಓಡಿಸಲಾಯಿತು.

ತೋಡಿನಲ್ಲಿದ್ದ ಮರಿಯಾನೆಯನ್ನು ರಕ್ಷಣೆ ಮಾಡಿ ಮರುಜೀವ ನೀಡಿದ ಇಲಾಖಾ ಸಿಬ್ಬಂದಿ ಸಮೀಪದ ಕಾಡಿನಲ್ಲಿ ಅದನ್ನು ಇರಿಸಿ, ತಾಯಾನೆಯೊಂದಿಗೆ ಮತ್ತೆ ಅದು ಒಂದಾಗುವ ಕ್ಷಣಕ್ಕೆ ಕುತೂಹಲದಿಂದ ಕಾಯುತ್ತಿದ್ದರು. ಆದರೆ, ದುರಾದೃಷ್ಟವಶಾತ್ ರಕ್ಷಣೆ ನೀಡಬೇಕಾದ ತಾಯಾನೆಯಿಂದಲೇ ಕಂದಮ್ಮನ ಮೃತ್ಯು ಸಂಭವಿಸಿತು.

ಕಾಡಿನಲ್ಲಿರಿಸಿದ್ದ ತ್ರಾಣ ರಹಿತ ಮರಿಯಾನೆಯತ್ತ ತಾಯಾನೆ ಹಾಗೂ ಇತರ ಮೂರು ಕಿರಿಯ ಆನೆಗಳು ಆಗಮಿಸಿದವು. ತನ್ನ ತ್ರಾಣ ರಹಿತ ಮಗುವನ್ನು ಒಮ್ಮೆ ಎಬ್ಬಿಸಲು ಪ್ರಯತ್ನಿಸಿತು