ಮಡಿಕೇರಿ, ನ. ೩೦: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕಳೆದ ಫೆಬ್ರವರಿ ತಿಂಗಳಿನಲ್ಲಿ ರಾಷ್ಟçಪತಿ ರಮಾನಾಥ್ ಕೋವಿಂದ್ ಅವರಿಂದ ಉದ್ಘಾಟಿಸಲ್ಪಟ್ಟಿರುವ ರಾಷ್ಟçದ ಹೆಮ್ಮೆಯ ಸೇನಾನಿ ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ ಮ್ಯೂಸಿಯಂ (ಸನ್ನಿಸೈಡ್) ಅನ್ನು ಮತ್ತಷ್ಟು ಅತ್ಯಾಕರ್ಷಕವನ್ನಾಗಿಸುವ ಪ್ರಯತ್ನವೊಂದು ಸದ್ದಿಲ್ಲದೆ ನಡೆಯುತ್ತಿದೆ. ಈ ಮ್ಯೂಸಿಯಂ ಪ್ರಸ್ತುತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿ ಬರುತ್ತಿದೆಯಾದರೂ ಈ ಮ್ಯೂಸಿಯಂ ಪ್ರಾರಂಭಿಸಲು ಪ್ರಮುಖ ಕಾರಣೀಭೂತರಾಗಿರುವ ಫೀ.ಮಾ. ಕಾರ್ಯಪ್ಪ-ಜನರಲ್ ತಿಮ್ಮಯ್ಯ ಫೋರಂನ ಪ್ರಮುಖರು ಇದೀಗ ಮತ್ತೊಂದು ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.
ಮ್ಯೂಸಿಯA ಆವರಣದಲ್ಲಿರುವ ಯುದ್ಧ ಸ್ಮಾರಕದ ಸನಿಹದಲ್ಲಿ ಭೂಸೇನೆಗೆ ಸಂಬAಧಿಸಿದ ಟ್ಯಾಂಕರ್, ವಾಯುಸೇನೆಗೆ ಸಂಬAಧಿಸಿದ ಏರ್ಕ್ರಾಫ್ಟ್ (ಯುದ್ಧ ವಿಮಾನ)ನ ಆಕರ್ಷಣೆ ಇದೆ. ಆದರೆ ಇಲ್ಲಿ ನೌಕಾದಳಕ್ಕೆ ಸಂಬAಧಿಸಿದAತೆ ಕೇವಲ ಎರಡು ಆ್ಯಂರ್ಸ್ ಮಾತ್ರ ಇದ್ದು, ನೌಕಾದಳದ ಆಕರ್ಷಣೆ ಕಡಿಮೆ ಇತ್ತು. ಈ ಕಾರಣವನ್ನು ಉಲ್ಲೇಖಿಸಿ ಈ ಹಿಂದೆ ಇಲ್ಲಿಗೆ ಆಗಮಿಸಿದ್ದ ಪ್ರಸ್ತುತ ನೌಕಾದಳದಲ್ಲಿ ರಿಯರ್ ಅಡ್ಮಿರಲ್ ಆಗಿರುವ ಕೊಡಗಿನವರೇ ಆದ ಐಚೆಟ್ಟಿರ ಬಿ. ಉತ್ತಯ್ಯ ಅವರ ಗಮನವನ್ನು ಅವರ ಸಂಬAಧಿಕರೂ ಆಗಿರುವ ಫೋರಂನ ಅಧ್ಯಕ್ಷ ಕರ್ನಲ್ ಕಂಡ್ರತAಡ ಸಿ. ಸುಬ್ಬಯ್ಯ ಅವರು ಸೆಳೆದಿದ್ದರು. ಸ್ಥಳದಲ್ಲೇ ನಿಂತು ವಾಸ್ತವತೆಯ ಬಗ್ಗೆ ವಿವರಿಸಿದ್ದ ಅವರು ಈ ಕೊರತೆಯ ಬಗ್ಗೆ ಅಧಿಕಾರಿಗೆ ಮನವರಿಕೆ ಮಾಡಿದ್ದರು. ಆ ಸಂದರ್ಭ ಈ ಬಗ್ಗೆ ತಾವು ಪರಿಶೀಲಿಸಿ ಪ್ರಯತ್ನ ನಡೆಸುವುದಾಗಿ ಉತ್ತಯ್ಯ ಅವರು ಭರವಸೆ ನೀಡಿದ್ದರು.
ಬಂದಿಳಿದಿರುವ ಯುದ್ಧ ನೌಕೆ ಮಾದರಿಗಳು
ಇದೀಗ ನೌಕಾದಳದ ಮೂಲಕ ಕೆಲವು ಆಕರ್ಷಣೀಯ ಮಾದರಿಗಳು ಭಾನುವಾರದಂದು ಮ್ಯೂಸಿಯಂಗೆ ಬಂದು ತಲುಪಿರುವುದು ವಿಶೇಷವಾಗಿದೆ. ೨೪ ಅಡಿ ಉದ್ದ ಹಾಗೂ ಸುಮಾರು ೬ ಅಡಿ ಅಗಲದ ಯುದ್ಧ ನೌಕೆಯ ಮಾದರಿಯೊಂದು ವಿಶೇಷ ಆಕರ್ಷಣೆಯಾಗಿ ಬಂದಿದೆ. ಇದರೊಂದಿಗೆ ಸಬ್ ಮೆರೀನ್ ೧೯೭೧ರ ಇಂಡೋ-ಪಾಕ್ ಸಮರದ ಸಂದರ್ಭದಲ್ಲಿನ ಗೆಹ್ಹುರುತಾದ ಐ.ಎನ್.ಎಸ್. ಕುಕ್ರಿಯ ಮಾದರಿ ಹಾಗೂ ಪಂಡೋಬಿಯ ಮಾದರಿ, ಆ್ಯಂಟಿ ಏರ್ಕ್ರಾಫ್ಟ್ ಗನ್ ಕೂಡ ಉತ್ತಯ್ಯ ಅವರ ಆಸಕ್ತಿಯ ಫಲವಾಗಿ ಜಿಲ್ಲೆಗೆ ತಲುಪಿದೆ. ಜೊತೆಗೆ ಇತ್ತೀಚಿಗಿನ ಐ.ಎನ್.ಎಸ್. ವಿಶಾಖಪಟ್ಟಣ ಎಂಬ ನೌಕೆಯ ಮಾದರಿಯೂ ಇಲ್ಲಿ ಗಮನ ಸೆಳೆಯಲಿದೆ. ಕೊಲ್ಕತ್ತಾದಿಂದ ಒಂದು ಮಾದರಿ ಹಾಗೂ ವಿಶಾಖಪಟ್ಟಣ ನೌಕಾ ನೆಲೆಯಿಂದ ಇತರ ಮಾದರಿಗಳು ಬಂದಿರುವುದಾಗಿ ಫೋರಂ ಅಧ್ಯಕ್ಷ ಕೆ.ಸಿ. ಸುಬ್ಬಯ್ಯ ಅವರು ತಿಳಿಸಿದ್ದಾರೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೂ ಸಮಾಲೋಚನೆ ನಡೆಸಲಾಗಿದೆ.
ಡಿ. ೧೩ ರಂದು ಉದ್ಘಾಟನೆ ಸಾಧ್ಯತೆ
ಈ ಮಾದರಿಗಳ ಸೂಕ್ತ ಅಳವಡಿಕೆ ಇನ್ನಷ್ಟೆ ಆಗಬೇಕಾಗಿದ್ದು, ಬಹುಶಃ ಇದರ ಉದ್ಘಾಟನೆ ಡಿ. ೧೩ ರಂದು ನಡೆಯುವ ಸಾಧ್ಯತೆ ಇದ್ದು, ಇದಕ್ಕೆ ಸಿದ್ಧತೆ ನಡೆಯುತ್ತಿದೆ.