ಚೆಟ್ಟಳ್ಳಿ, ನ. ೨೯: ಕೊಡಗು ಸುನ್ನಿ ವೆಲ್ಫೇರ್ ಸೌದಿ ರಾಷ್ಟಿçÃಯ ಸಮಿತಿ ವಾರ್ಷಿಕ ಮಹಾಸಭೆ ರಿಯಾದ್ ಅಲ್ ಮಾಸ್ ರೆಸ್ಟಾರೆಂಟ್‌ನಲ್ಲಿ ನಡೆಯಿತು.
ಮಹಾಸಭೆಯಲ್ಲಿ ೨೦೨೨-೨೩ ರ ಹೊಸ ರಾಷ್ಟಿçÃಯ ಸಮಿತಿಯನ್ನು ಕೆ.ಎಸ್.ಡ್ಲ್ಯೂ.ಎ. ಜಿ.ಸಿ.ಸಿ. ಕೋಶಾಧಿಕಾರಿ ಅಲಿ ಮುಸ್ಲಿಯಾರ್ ಬಹರೈನ್ ಘೋಷಿಸಿದರು.
ಕೊಡಗು ಸುನ್ನಿ ವೆಲ್ಫೇರ್ ಅಧ್ಯಕ್ಷರಾಗಿ ಹಂಸ ಮುಸ್ಲಿಯಾರ್ ಚೋಕಂಡಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಆಬಿದ್ ಕಂಡಕರೆ ಹಾಗೂ ಕೋಶಾಧಿಕಾರಿಯಾಗಿ ಸಿದ್ದೀಕ್ ಝಹ್ರಿ ಆಯ್ಕೆಯಾದರು.
ಸಲಹಾ ಸಮಿತಿ ಚೇರ್ಮೆನ್ ಆಗಿ ಡಾಕ್ಟರ್, ಫಹೀಂ ರಹ್ಮಾನ್ ಮಕ್ಕತುಲ್ ಮುಕರ್ರಮ್, ಕೋರ್ಡಿನೇಟರ್ ಆಗಿ ಹಫೀಲ್ ಸಅದಿ ಕೊಳಕೇರಿ ಕಾರ್ಯದರ್ಶಿಯಾಗಿ, ಶಂಸು ತಕ್ಕಪ್ಪಳ್ಳಿ ಸಾಂತ್ವನ ವಿಭಾಗದ ಪ್ರಮುಖರಾಗಿ,ರಫೀಕ್ ನೆಲ್ಲಿಹುದಿಕೇರಿ, ಕನ್ವೀನರ್ ಆಗಿ ಅಬ್ದುಲ್ ಸಲಾಂ ಬಾರಿಕೆ, ಮೀಡಿಯಾ ವಿಂಗ್ ಪ್ರಮುಖರಾಗಿ ಸ್ವಾದಿಖ್ ಎಡಪ್ಪಲ, ಕನ್ವೀನರ್ ಆಗಿ ಬಷೀರ್ ವಯಕ್ಕೋಲ್ ಆಯ್ಕೆಯಾದರು. ಸಲಹಾ ಸಮಿತಿ ಸದಸ್ಯರಾಗಿ, ಸಯ್ಯದ್ ಅಬ್ದುಲ್ ಕಾದರ್ ತಂಙಳ್, ಸಯ್ಯದ್ ರಫೀಕ್ ತಂಙಳ್ ಆಬಿದ್ ಝುಹ್ರಿ ಚೇರಂಬಾಣೆ, ಹಂಸ ಹಾಜಿ, ಶಂಸು ಮುಸ್ಲಿಯಾರ್, ಹಂಸ ಮುಸ್ಲಿಯಾರ್ ಕೊಂಡAಗೇರಿ, ಹಂಸ ಮುಸ್ಲಿಯಾರ್ ಪೊನ್ನಂಪೇಟೆ ರಿಯಾದ್, ಮುಸ್ತಫ ಕಡಂಗ ಆಯ್ಕೆಯಾದರು.
ಉಪಾಧ್ಯಕ್ಷರಾಗಿ, ಅಬ್ದುರಹ್ಮಾನ್ ಅಯ್ಯಂಗೇರಿ, ಆದಂ ಕಂಡಕರೆ, ಅಬ್ದುಲ್ ರಝಾಖ್ ಹಾಗೂ ಶಂಸು ಮುಬಾರಕ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ, ಟಿಮಜೀದ್ ಚೇರಂಬಾಣೆ , ನಝೀರ್ ಗುಂಡಿಕೆರೆ, ಫಾರೂಕ್ ಮುಸ್ಲಿಯಾರ್, ಹಂಸು ಕೊಟ್ಟಮುಡಿ, ಯಾಂಬು ಮತ್ತು ೧೫ ಕಾರ್ಯಕಾರಿ ಸಮಿತಿ ಸದಸ್ಯರುಗಳು ಆಯ್ಕೆಯಾದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಲಿ ಮುಸ್ಲಿಯಾರ್ ಬಹರೈನ್, ಡಾಕ್ಟರ್ ಫಹೀಂ ರಹ್ಮಾನ್ ಮತ್ತು ರಾಷ್ಟಿçÃಯ ಮಟ್ಟದಲ್ಲಿ ಅತ್ಯುತ್ತಮ ಕಾರ್ಯ ಕರ್ತನಾಗಿ ಆಯ್ಕೆಯಾದ ಶಂಸು ತಕ್ಕಪ್ಪಳ್ಳಿ ಮುಂತಾದವರನ್ನು ಕಾಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಆಬಿದ್ ಕಂಡಕ್ಕರೆ ನಿರೂಪಿಸಿ, ರಫೀಖ್ ಎಡಪ್ಪಲ ವಂದಿಸಿದರು.