ಚೆಟ್ಟಳ್ಳಿ, ನ. ೨೯ : ಬೊಟ್ಟಿಯತ್‌ನಾಡ್ ಕುಂದ ಬೆಟ್ಟದಲ್ಲಿರುವ ಬೊಟ್ಲಪ್ಪ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯು ವಂತೆ ಈ ಬಾರಿಯೂ ಕೊನೆಯ ಕಾರ್ತಿಕ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು.

ಪುರಾತನ ಕಾಲ ದೇವಾಲಯದಲ್ಲಿ ವರ್ಷಂಪ್ರತಿ ಕಾರ್ತಿಕ ಪೂಜೆ ಹಾಗೂ ತುಲಾಸಂಕ್ರಮಣದ ಮರುದಿನ ನಡೆಯುವ ಬೇಡುಹಬ್ಬದಲ್ಲಿ ಮಾತ್ರ ಪೂಜೆ ನಡೆಯುವುದು ಇಲ್ಲಿನ ವಿಶೇಷವಾಗಿದೆ. ಈ ಪೂಜಾ ಕೈಂಕರ್ಯದಲ್ಲಿ ಊರುನಾಡು ಸೇರಿದಂತೆ ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು.