ರಾಷ್ಟಿçÃಯ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಜಾರಿಗೊಳಿಸಲಾದ ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ಪ್ರಮುಖ ಯೋಜನೆಯಾಗಿದೆ.
ಈ ಯೋಜನೆಯು ಹೆಚ್ಚಿನ ಸಂಖ್ಯೆಯ ಭಾರತೀಯ ಯುವಕರಿಗೆ ಉದ್ಯಮ-ಸಂಬAಧಿತ ಕೌಶಲ್ಯ ತರಬೇತಿಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ, ಅದು ಅವರಿಗೆ ಉತ್ತಮ ಜೀವನೋಪಾಯಕ್ಕೆ ಸಹಾಯ ಮಾಡುತ್ತದೆ. ಮುಂಚಿನ ಕಲಿಕೆಯ ಅನುಭವ ಅಥವಾ ಕೌಶಲ್ಯ ಹೊಂದಿರುವ ವ್ಯಕ್ತಿಗಳನ್ನು ಪೂರ್ವ ಕಲಿಕೆಯ ಮೌಲ್ಯಮಾಪನ ಮಾಡಿ, ಪ್ರಮಾಣೀಕರಿಸಲಾಗುತ್ತದೆ.
ದೇಶದ ಯುವಕರಿಗೆ ಉಜ್ವಲ ಭವಿಷ್ಯವನ್ನು ನಿರ್ಮಿಸುವುದು ಕಷ್ಟವಾಗಬಹುದು, ಇದಕ್ಕಾಗಿಯೇ ಯುವ ವರ್ಗದ ಭವಿಷ್ಯವನ್ನು ಉಜ್ವಲವಾಗಿಸಲು ಭಾರತ ಸರ್ಕಾರವು ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ ಅನ್ನು ಪ್ರಾರಂಭಿಸಿತು. "ತರಬೇತಿ ಮತ್ತು ಮೌಲ್ಯಮಾಪನ ಶುಲ್ಕವನ್ನು ಸಂಪೂರ್ಣವಾಗಿ ಸರ್ಕಾರವು ಪಾವತಿಸುತ್ತದೆ". ಈ ಯೋಜನೆಯು ವಿತ್ತೀಯ ಪ್ರತಿಫಲಗಳು ಮತ್ತು ಪ್ರಶಸ್ತಿಗಳನ್ನು ವಿತರಿಸುವ ಮೂಲಕ ದೈನಂದಿನ ವೇತನದಾರರ ಕೆಲಸದ ದಕ್ಷತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, ನಂತರ ದೇಶದ ಯುವಕರಿಗೆ ಉಚಿತ ಕೌಶಲ್ಯ ತರಬೇತಿಯನ್ನು ನೀಡುತ್ತದೆ.
ಅಲ್ಪಾವಧಿಯ ತರಬೇತಿ : ಉದ್ಯಮಶೀಲತೆ, ಮೃದು ಕೌಶಲ್ಯಗಳು ಮತ್ತು ಹಣಕಾಸು ಮತ್ತು ಡಿಜಿಟಲ್ ಸಾಕ್ಷರತೆಯಂತಹ ಕ್ಷೇತ್ರಗಳಲ್ಲಿ ತರಬೇತಿ ನೀಡುವ ವಿವಿಧ ತರಬೇತಿ ಕೇಂದ್ರಗಳು ಇವೆ. ನಿರುದ್ಯೋಗಿಗಳು ಮತ್ತು ಶಾಲೆ ಅಥವಾ ಕಾಲೇಜು ಬಿಟ್ಟವರನ್ನು ಒಳಗೊಂಡಿರುವ ಈ ತರಬೇತಿ ಕಾರ್ಯಕ್ರಮದಿಂದ ಹಲವಾರು ಅಭ್ಯರ್ಥಿಗಳು ಪ್ರಯೋಜನ ಪಡೆಯುತ್ತಿರುವರು. ತರಬೇತಿ ಕಾರ್ಯಕ್ರಮಗಳು ರಾಷ್ಟಿçÃಯ ಕೌಶಲ್ಯ ಅರ್ಹತಾ ಚೌಕಟ್ಟಿನಲ್ಲಿ ಬರುತ್ತವೆ. ತರಬೇತಿ ಕಾರ್ಯಕ್ರಮದ ಅವಧಿಯು ಸಾಮಾನ್ಯವಾಗಿ ೧೫೦ - ೩೦೦ ಗಂಟೆಗಳ ನಡುವೆ ಇರುತ್ತದೆ.
ಪೂರ್ವ ಕಲಿಕೆಯ ಗುರುತಿಸುವಿಕೆ : ವ್ಯಕ್ತಿಯ ಅಸ್ತಿತ್ವದಲ್ಲಿರುವ ಕೌಶಲ್ಯ ಸೆಟ್, ಜ್ಞಾನ ಮತ್ತು ಔಪಚಾರಿಕ ಅಥವಾ ಅನೌಪಚಾರಿಕ ಕಲಿಕೆಯಿಂದ ಪಡೆದ ಅನುಭವವನ್ನು ಮೌಲ್ಯಮಾಪನ ಮಾಡಲು ಬಳಸುವ ಮೌಲ್ಯಮಾಪನ ಪ್ರಕ್ರಿಯೆಯನ್ನು ಸೂಚಿಸುತ್ತದೆ. ಹಿಂದಿನ ಕಲಿಕೆಯ ಅನುಭವ ಅಥವಾ ಕೌಶಲ್ಯ ಹೊಂದಿರುವ ವ್ಯಕ್ತಿಗಳನ್ನು ಪಿಎಂಕೆವಿವೈ ಯೋಜನೆಯ ಘಟಕಗಳಲ್ಲಿ ಪ್ರಿಯರ್ ಲರ್ನಿಂಗ್ ಗುರುತಿಸುವಿಕೆಯ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ. ಪ್ರಸ್ತುತ ೬ ಲಕ್ಷಕ್ಕೂ ಹೆಚ್ಚು ವ್ಯಕ್ತಿಗಳು ಪ್ರಮಾಣೀಕೃತರಾಗಿದ್ದಾರೆ. ಅವರಿಗೆ ಪ್ರಾಜೆಕ್ಟ್ ಇಂಪ್ಲಿಮೆAಟಿAಗ್ ಏಜೆನ್ಸಿಗಳು ತಮ್ಮ ಜ್ಞಾನದ ಅಂತರವನ್ನು ಪರಿಹರಿಸಲು ಮತ್ತು ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿಗಳಿಗೆ ಅವರನ್ನು ಸಿದ್ಧಗೊಳಿಸಲು ಬ್ರಿಡ್ಜ್ ಕೋರ್ಸ್ಗಳನ್ನು ನೀಡುತ್ತವೆ.
ವಿಶೇಷ ಯೋಜನೆಗಳು: ಸರ್ಕಾರಿ ಸಂಸ್ಥೆಗಳು, ಉದ್ಯಮ ಸಂಸ್ಥೆಗಳು ಮತ್ತು ಕಾರ್ಪೊರೇಟ್ ಕಚೇರಿಗಳ ವಿಶೇಷ ಪ್ರದೇಶಗಳು ಅಥವಾ ಆವರಣದಲ್ಲಿ ತರಬೇತಿ ನೀಡಲಾಗುತ್ತದೆ. ಲಭ್ಯವಿರುವ ಅರ್ಹತಾ ಪ್ಯಾಕ್‌ಗಳು (ಕ್ಯೂಪಿಗಳು)/ರಾಷ್ಟಿçÃಯ ಆಕ್ಯುಪೇಷನಲ್ ಸ್ಟ್ಯಾಂಡರ್ಡ್ಸ್ (ಎನ್‌ಒಎಸ್) ಅಡಿಯಲ್ಲಿ ವ್ಯಾಖ್ಯಾನಿಸದ ವಿಶೇಷ ಉದ್ಯೋಗ ಪಾತ್ರಗಳಲ್ಲಿ ತರಬೇತಿಯನ್ನು ನೀಡಲಾಗುತ್ತದೆ. ಇದು ಅಲ್ಪಾವಧಿಯ ತರಬೇತಿಗಿಂತ ಸ್ವಲ್ಪ ಭಿನ್ನವಾಗಿರುತ್ತವೆ. ವಿಶೇಷ ಯೋಜನೆಗಳ ಪ್ರಾಥಮಿಕ ಉದ್ದೇಶವು ಸಮಾಜದ ದುರ್ಬಲ ಮತ್ತು ಬದಿಗೊತ್ತಿದ ಗುಂಪುಗಳಲ್ಲಿ ತರಬೇತಿಯನ್ನು ಉತ್ತೇಜಿಸುವುದು.
ಕೌಶಲ್ ಮತ್ತು ರೋಜ್‌ಗಾರ್ ಮೇಳ: ಕೌಶಲ್ ಮತ್ತು ರೋಜ್‌ಗಾರ್ ಮೇಳವನ್ನು ತರಬೇತಿ ಪಾಲುದಾರರು ೬ ತಿಂಗಳಿಗೊಮ್ಮೆ ಮಾಧ್ಯಮ ಪ್ರಸಾರದೊಂದಿಗೆ ಸಭೆ ನಡೆಸುತ್ತಾರೆ. ಒಂದು ನಿರ್ದಿಷ್ಟ ಸಜ್ಜುಗೊಳಿಸುವ ಪ್ರಕ್ರಿಯೆಯ ಮೂಲಕ ಗುರಿ ಫಲಾನುಭವಿಗಳ ಒಳಗೊಳ್ಳುವಿಕೆಗೆ ಪ್ರಾಮುಖ್ಯತೆಯನ್ನು ನೀಡುತ್ತದೆ. ತರಬೇತಿ ಪಾಲುದಾರರು ರಾಷ್ಟಿçÃಯ ವೃತ್ತಿ ಸೇವಾ ಮೇಳಗಳು ಮತ್ತು ಆನ್-ಗ್ರೌಂಡ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಅತ್ಯಗತ್ಯ.
ನಿಯೋಜನೆ ಸಹಾಯ : ತರಬೇತಿ ಪಾಲುದಾರರು ಈ ಯೋಜನೆಯಡಿ ಪ್ರಮಾಣೀಕರಿಸಿದ ವ್ಯಕ್ತಿಗಳಿಗೆ ಉದ್ಯೋಗ ಅವಕಾಶ. ತರಬೇತಿ ಪಾಲುದಾರರು ಉದ್ಯಮಿಗಳ ಅಭಿವೃದ್ಧಿಗೆ ಬೆಂಬಲವನ್ನು ನೀಡಬೇಕು. ಅಭ್ಯರ್ಥಿಯು ಈ ಮಾನದಂಡಗಳನ್ನು ಪೂರೈಸಿದರೆ ಅವರನ್ನು ಕಾಶಲ್ಯ ಪರಿಣಿತರೆಂದು ಪರಿಗಣಿಸಲಾಗುತ್ತದೆ. ಅಭ್ಯರ್ಥಿಯನ್ನು ಪ್ರಮಾಣೀಕರಿಸಲಾಗುತ್ತದೆ. ಅಭ್ಯರ್ಥಿಯು ೩ ತಿಂಗಳ ನಿಯಮಿತ ಉದ್ಯೋಗವನ್ನು (ಸ್ವಯಂ/ವೇತನ) ಯಶಸ್ವಿಯಾಗಿ ಪೂರ್ಣಗೊಳಿಸಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತದೆ.
ವೇತನ: ಉದ್ಯೋಗದಲ್ಲಿರುವ ಅಭ್ಯರ್ಥಿಗಳು ರಾಜ್ಯ ಉದ್ಯೋಗ ಮಾರ್ಗಸೂಚಿಗಳಿಂದ ವ್ಯಾಖ್ಯಾನಿಸಲ್ಪಟ್ಟಂತೆ ಕನಿಷ್ಟ ವೇತನಕ್ಕೆ ಸಮಾನವಾದ ಅಥವಾ ಅದಕ್ಕಿಂತ ಹೆಚ್ಚಿನದನ್ನು ಗಳಿಸುತ್ತಿದ್ದಾರೆ.
ಧನ ಸಹಾಯ : ಕೌಶಲ್ಯ ತರಬೇತಿಯನ್ನು ಪಡೆದ ನಂತರ, ವ್ಯಕ್ತಿಯು ವ್ಯಾಪಾರ ಸಾಲವನ್ನು ತೆಗೆದುಕೊಳ್ಳುವ ಮೂಲಕ ಅವನು/ಳು ಸ್ವಂತ ವ್ಯವಹಾರವನ್ನು ಪ್ರಾರಂಭಿಸಬಹುದು. ಇದಕ್ಕಾಗಿ ಮುದ್ರಾ ಯೋಜನೆಯಡಿ ಬ್ಯಾಂಕ್‌ಗಳಿAದ ಸಾಲಗಳು ಲಭ್ಯವಿದೆ. ಈ ಯೋಜನೆಯ ಮುಖಾಂತರ ಪ್ರತಿ ವರ್ಷವೂ ಲಕ್ಷಾಂತರ ಮಂದಿ ಉದ್ಯೋಗ ಪಡೆಯುತ್ತಿರುವರು. ೨೫೨ ಔದ್ಯೋಗಿಕ ಅವಕಾಶಗಳಿಗೆ ಕುರಿತಂತೆ ೧೯೮ಕ್ಕೂ ಉದ್ಯೋಗ ಅವಕಾಶಗಳಿಗಾಗಿ ತರಬೇತಿ ನೀಡಲಾಗುತ್ತದೆ.
ಮಾಹಿತಿಗಾಗಿ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ hಣಣಠಿ://ಡಿಠಿಟಜಚಿಠಿ.ಠಿmಞvಥಿoಜಿಜಿiಛಿiಚಿಟ.oಡಿg/ ವಿದ್ಯಾರ್ಥಿ ಸಹಾಯವಾಣಿ: ೮೮೦-೦೦೫-೫೫೫೫ ಸ್ಮಾರ್ಟ್ ಸಹಾಯವಾಣಿ: ೧೮೦೦-೧೨೩-೯೬೨೬, ಸಹಾಯವಾಣಿ: ೧೮೦೦-೧೨೩-೯೬೨೬. ವಿವರ ಮತ್ತು ಹೆಸರು ನೋಂದಣಿಗಾಗಿ ಸಮೀಪದ ಸಾಮಾನ್ಯ ಸೇವಾ ಕೇಂದ್ರ ಅಥವಾ ಸೈಬರ್ ಕೇಂದ್ರಗಳನ್ನು ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಥವಾ ಜಿಲ್ಲಾ ಕೈಗಾರಿಕಾ ಕೇಂದ್ರದ ಕಚೇರಿಯನ್ನು ಸಂಪರ್ಕಿಸಬಹುದು.
-ಕೂಡಂಡ ರವಿ, ಹೊದ್ದೂರು.