ಮಡಿಕೇರಿ, ನ. ೨೯: ಇಂದು ಎನ್‌ಸಿಸಿ ದಿನಾಚರಣೆಯ ಪ್ರಯುಕ್ತ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‌ಸಿಸಿ ಘಟಕದ ವತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು ಮೇಜರ್ ಡಾ. ರಾಘವ್ ರವರ ನೇತೃತ್ವದಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಕಾಲೇಜಿನ ಗಣಕವಿಜ್ಞಾನದ ಶ್ರೀ ಎಂ, ಎನ್ ರವಿಶಂಕರ್, ಸ್ನಾತಕೋತ್ತರ ಆಂಗ್ಲವಿಭಾಗದ ಮುಖ್ಯಸ್ಥರಾದ ಡಾ, ನಯನ ಕಶ್ಯಪ್, ಹಿಂದಿ ವಿಭಾಗದ ಉಪನ್ಯಾಸಕರಾದ ಖುರ್ಷಿದ್ ಭಾನು, ಅರ್ಥಶಾಸ್ತçÀ್ತ ವಿಭಾಗದ ಉಪನ್ಯಾಸಕರಾದ ಸೌಮ್ಯ, ಎನ್.ಸಿ.ಸಿ ಮುಖಂಡರಾದ ಇಂದ್ರಜಿತ್, ಯಶಸ್ವಿ, ಜಯಂತ್, ಭೂಮಿಕ, ರೂಪಶ್ರೀ, ಕಾರ್ತಿಕ್ ಮತ್ತು ಇನ್ನಿತರ ಎನ್‌ಸಿಸಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.