ಗೋಣಿಕೊಪ್ಪಲು, ನ.೨೯: ಸರ್ಕಾರದ ಸೂಚನೆಯಂತೆ ವಿವಿಧ ಇಲಾಖೆಯ ಅಧಿಕಾರಿಗಳು ದ.ಕೊಡಗಿನ ಕೆಲವು ಗ್ರಾಮಗಳಿಗಷ್ಟೆ ಭೇಟಿ ನೀಡಿ ಅಲ್ಲಿಯ ಬೆಳೆ ನಷ್ಟವನ್ನು ವೀಕ್ಷಣೆ ನಡೆಸಿ ಕೆಲವು ಗ್ರಾಮಗಳ ಹೆಸರುಗಳನ್ನು ಮಾತ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಉಳಿದ ಗ್ರಾಮಗಳನ್ನು ಸಮೀಕ್ಷೆ ನಡೆಸಲು ಹಿಂದೇಟು ಹಾಕಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘ ತೀವ್ರವಾಗಿ ಖಂಡಿಸಿದೆ.

ರೈತ ಸಂಘದ ಕೇಂದ್ರ ಕಚೇರಿ ಗೋಣಿಕೊಪ್ಪಲುವಿನಲ್ಲಿ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪದಾಧಿಕಾರಿಗಳ ಸಭೆಯಲ್ಲಿ ಜಿಲ್ಲೆಯ ವಿವಿಧ ಭಾಗದ ರೈತ ಮುಖಂಡರು ಭಾಗವಹಿಸಿ ತಮ್ಮ ಗ್ರಾಮದಲ್ಲಿ ಇಲಾಖಾಧಿಕಾರಿಗಳು ಬೆಳೆ ನಷ್ಟದ ಪರಿಹಾರ ವರದಿಯಲ್ಲಿ ತಾರತಮ್ಯ ಎಸಗಿದ್ದಾರೆಂದು ಆರೋಪಿಸಿದರು. ರೈತ ಮುಖಂಡರ ದೂರಿನಂತೆ ಇಲಾಖಾಧಿಕಾರಿಗಳು ಬೆಳೆ ನಷ್ಟದ ಪರಿಹಾರದ ವರದಿಯನ್ನು ತಹಶೀಲ್ದಾರ್‌ರವರಿಗೆ ಸಲ್ಲಿಸಿರುವುದನ್ನು ಖಚಿತಪಡಿಸಿಕೊಂಡ ನಂತರ ಈ ಬಗ್ಗೆ ತಾಲೂಕು ಅಧಿಕಾರಿಗಳಿಗೆ, ತಹಶೀಲ್ದಾರರಿಗೆ ಪತ್ರ ಬರೆಯುವ ನಿರ್ಧಾರ ತೆಗೆದುಕೊಳ್ಳಲಾಯಿತು.

ಕೊಡಗಿನ ೫ ತಾಲೂಕಿನಲ್ಲಿ ಕಳೆದ ಏಳು ತಿಂಗಳಿನಿAದ ಸತತವಾಗಿ ಮಳೆ ಸುರಿಯುತ್ತಿದ್ದು ಭೂಮಿಯ ತೇವಾಂಶ ಹೆಚ್ಚಾಗಲು ಕಾರಣವಾಗಿದೆ. ಇದರಿಂದ ರೈತರು ಬೆಳೆದ ಕಾಫಿ, ಅಡಿಕೆ ಹಾಗೂ ಕರಿಮೆಣಸು ಫಸಲುಗಳು ಕೊಳೆ ರೋಗಕ್ಕೆ ತುತ್ತಾಗಿ ರೈತರು ಶೇ.೯೦ರಷ್ಟು ಫಸಲನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಈ ಬಗ್ಗೆ ಕೊಡಗು ಜಿಲ್ಲೆಯನ್ನು ಅತಿವೃಷ್ಟಿ ಪ್ರದೇಶವೆಂದು ಪರಿಗಣಿಸಿ ಕೊಡಗಿನ ಎಲ್ಲಾ ಗ್ರಾಮಗಳನ್ನು ಒಳಗೊಂಡAತೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ ಮಾನದಂಡದAತೆ ಹಾಗೂ ರಾಜ್ಯ ಸರ್ಕಾರದ ಎಸ್‌ಡಿಆರ್‌ಎಫ್ ಮಾನದಂಡದAತೆ ಸಂಕಷ್ಟದಲ್ಲಿರುವ ಕೊಡಗಿನ ರೈತರಿಗೆ ಪರಿಹಾರ ಘೋಷಿಸಬೇಕೆಂದು ಜಿಲ್ಲಾಡಳಿತವನ್ನು ಮನುಸೋಮಯ್ಯ ಒತ್ತಾಯಿಸಿದರು.

ತಕ್ಷಣವೇ ತಹಶೀಲ್ದಾರ್‌ರವರ ಸಮ್ಮುಖದಲ್ಲಿ ರೈತರು ಹಾಗೂ ಬೆಳೆ ನಷ್ಟದ ಸಮೀಕ್ಷೆ ನಡೆಸಿದ ಅಧಿಕಾರಿಗಳ ಸಭೆಯನ್ನು ಏರ್ಪಡಿಸಿ ಮುಂದಿನ ತೀರ್ಮಾನವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ರೈತ ಮುಖಂಡರಾದ ಶಂಕರಪ್ಪ, ಕೆ.ಎಂ.ದಿನೇಶ್, ಜಯಶಂಕರ್, ಹೂವಯ್ಯ, ಚಂದ್ರಶೇಖರ್, ರಾಜಪ್ಪ, ಕಾನೂನು ಸಲಹೆಗಾರರಾದ ಹೇಮಚಂದ್ರ ಮುಂತಾದವರು ಸಭೆಯಲ್ಲಿ ತಮ್ಮ ಗ್ರಾಮಗಳ ಸಮಸ್ಯೆಗಳನ್ನು ವಿವರಿಸಿದರು.

ಸಭೆಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ವಿವಿಧ ಹೋಬಳಿಯ ಅಧ್ಯಕ್ಷ ಆಲೆಮಾಡ ಮಂಜುನಾಥ್, ಚೆಟ್ಟಂಗಡ ಕಂಬ ಕಾರ್ಯಪ್ಪ, ಚಂಗುಲAಡ ಸೂರಜ್, ಮೇಚಂಡ ಕಿಶ ಮಾಚಯ್ಯ, ಚೊಟ್ಟೆಕಾಳಪಂಡ ಮನು, ಪುಚ್ಚಿಮಾಡರಾಯ್ ಮಾದಪ್ಪ, ತೀತರಮಾಡರಾಜ, ಮುಂತಾದವರು ಉಪಸ್ಥಿತರಿದ್ದರು.