ಮಡಿಕೇರಿ, ನ. ೨೯: ಕುಂಬಳದಾಳಿನಿAದ ಮೂರ್ನಾಡಿಗೆ ಸಂಚರಿಸುವ ಸರಕಾರಿ ಬಸ್ ಸರಿಯಾಗಿ ಸಮಯ ಪಾಲನೆ ಮಾಡದಿರುವ ಕುರಿತು, ಹೊದವಾಡ, ಮೂರ್ನಾಡು ಹಾಗೂ ಕುಂಬಳದಾಳಿನ ಗ್ರಾಮಸ್ಥರು ಮಡಿಕೇರಿ ಡಿಪೋ ವ್ಯವಸ್ಥಾಪಕಿ ಗೀತಾ ಅವರ ಗಮನಕ್ಕೆ ತಂದರು. ವ್ಯವಸ್ಥಾಪಕರ ಕಚೇರಿಗೆ ತೆರಳಿದ ಕೆಲ ಗ್ರಾಮಸ್ಥರು, ಸರಿಯಾದ ಸಮಯಕ್ಕೆ ಬಸ್ ಸಂಚಾರ ಮಾಡುವಂತೆ ಮನವಿ ಮಾಡಿದರು.
ಈ ಹಿಂದೆ ಕುಂಬಳದಾಳಿನಿAದ ಬೆಳಿಗ್ಗೆ ೮.೫೦ಕ್ಕೆ ಹೊರಡುತ್ತಿದ್ದ ಬಸ್, ಸುಮಾರು ೯ ಗಂಟೆಗೆ ಮೂರ್ನಾಡು ತಲುಪುತ್ತಿತ್ತು. ಆದರಿದೀಗ ಹಲವು ದಿನಗಳಿಂದ ೯.೨೦ ಗಂಟೆಗೆ ಮೂನಾರ್ಡಿಗೆ ತಲುಪುತ್ತಿದೆ. ನಂತರ ಇಲ್ಲಿಂದ ಮಡಿಕೇರಿಗೆ ತಲುಪುವಷ್ಟರಲ್ಲಿ ೧೦ ಗಂಟೆಯಾಗಿರುತ್ತದೆ. ಇದರಿಂದ ಹಲವಷ್ಟು ಮಂದಿಗೆ, ಮುಖ್ಯವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಕಾಲೇಜು ತಲುಪಲು ಸಾಧ್ಯವಾಗುತ್ತಿಲ್ಲ.
ಕುಂಬಳದಾಳುವಿನಿAದ ೮.೪೫ ಅಥವಾ ೮.೫೦ಕ್ಕೆ ಬಸ್ ಹೊರಟಲ್ಲಿ, ಎಲ್ಲರಿಗೂ ಅನುಕೂಲವಾಗಲಿದ್ದು, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಾಗಿ ಡಿಪೋ ವ್ಯವಸ್ಥಾಪಕರಿಗೆ ನೀಡಿದ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಮನವಿ ನೀಡುವ ಸಂದರ್ಭ ಕುಂಬಳದಾಳಿನ ಎನ್.ಎನ್. ದೇವಯ್ಯ, ಎನ್.ಜಿ. ಭರತ್, ಪೂಣಚ್ಚ, ಮುಕ್ಕಾಟಿರ ಹರೀಶ್, ಮುಕ್ಕಾಟಿರ ನವೀನ್, ಹೊದವಾಡದ ಚೌರಿರ ಐ. ಬೋಪಯ್ಯ, ಸಿ.ಕೆ. ಅಪ್ಪಯ್ಯ ಹಾಗೂ ಮೂರ್ನಾಡು ಗ್ರಾಮದ ಆನಂದ್, ಪ್ರಶಾಂತ್, ವಿವೇಕ್, ಸಮೀರ್ ಹಾಗೂ ಇತರರು ಇದ್ದರು.