ಸೋಮವಾರಪೇಟೆ,ನ.೨೯: ವಿಧಾನ ಪರಿಷತ್ ಹಾಗೂ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಮುಂದಿನ ವಾರದಲ್ಲಿ ನಡೆಯುತ್ತಿದ್ದು, ಇದೇ ಸಂದರ್ಭ ಡಿಸೆಂಬರ್ ೬ ರಂದು ಜಿಲ್ಲಾ ಒಕ್ಕಲಿಗರ ಸಂಘವು ಗ್ರಾ.ಪಂ.ನಲ್ಲಿ ಚುನಾಯಿತರಾದ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿರುವುದು ಸರಿಯಲ್ಲ ಎಂದು ಒಕ್ಕಲಿಗ ಸಮುದಾಯದ ಕೆಲ ಮುಖಂಡರು ಅಭಿಪ್ರಾಯಿಸಿದ್ದಾರೆ. ಡಿ. ೬ ರಂದು ವಿವಿಧ ಸಹಕಾರ ಸಂಘಗಳಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಚುನಾಯಿತರಾದವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಚುನಾವಣಾ ದೃಷ್ಟಿಯಿಂದ ಸಮಂಜಸವಲ್ಲ. ಈ ಸಂದರ್ಭ ಸನ್ಮಾನ ಕಾರ್ಯಕ್ರಮವನ್ನು ಕೈ ಬಿಡುವುದು ಒಳಿತು ಎಂದು ಕುಶಾಲನಗರದ ಕೊಮಾರಪ್ಪ, ಉಮಾಶಂಕರ್, ಕೆ.ಜಿ ಮನು, ಕಿಬ್ಬೆಟ್ಟ ಮಧು, ಸೋಮವಾರಪೇಟೆಯ ಶರತ್, ಜೀವನ್ ನೇಗಳ್ಳೆ, ಚಂದ್ರು ಹುಲ್ಲುರಿಕೊಪ್ಪ, ಯೋಗೇಶ್ ಮಾಟ್ನಳ್ಳಿ ಸೇರಿದಂತೆ ಇತರರು ಪ್ರಕಟಣೆಯಲ್ಲಿ ಅಭಿಪ್ರಾಯಿಸಿದ್ದಾರೆ.