ಸುAಟಿಕೊಪ್ಪ, ನ. ೨೯: ಇಲ್ಲಿಗೆ ಸಮೀಪದ ೭ನೇ ಹೊಸಕೋಟೆ ವ್ಯಾಪ್ತಿಯ ತೊಂಡೂರು ಗ್ರಾಮದಲ್ಲಿ ದಿನಂಪ್ರತಿ ಬೆಳಿಗ್ಗೆ ಕಾಡಾನೆಗಳು ರಸ್ತೆಯಲ್ಲಿ ವಾಯು ವಿಹಾರ ಮಾಡುತ್ತಿದ್ದು, ಇದರಿಂದ ಇಲ್ಲಿನ ಗ್ರಾಮಸ್ಥರು ಆತಂಕ್ಕೊಳಗಾಗಿದ್ದಾರೆ. ಸಮೀಪದ ಅರಣ್ಯದಿಂದ ರಾತ್ರಿ ಬಂದು ಕಾಫಿ ತೋಟಕ್ಕೆ ನುಗ್ಗಿ ಫಲಭರಿತ ಕೃಷಿಗಳನ್ನು ನಾಶಪಡಿಸಿ ಬೆಳಗ್ಗಿನ ಜಾವ ರಸ್ತೆಯಲ್ಲಿ ಗಜಪಡೆ ವಾಕಿಂಗ್ ಹೋಗುತ್ತಿವೆ. ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೂ ಇದರಿಂದ ತೊಂದರೆಯಾಗಿದ್ದು, ಕೂಡಲೇ ಅರಣ್ಯ ಇಲಾಖೆ ಸೂಕ್ತ ಕ್ರಮ ವಹಿಸಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.