ನಾಪೋಕ್ಲು, ನ. ೨೯: ನಾಪೋಕ್ಲು ವ್ಯಾಪ್ತಿಯ ಕೆಲವು ಗ್ರಾಮಗಳನ್ನು ಕಾಳು ಮೆಣಸು ಪರಿಹಾರ ಪಟ್ಟಿಗೆ ಮಾತ್ರ ಸೇರಿಸಲಾಗಿದೆ. ಕಾಫಿ ಬೆಳೆಯನ್ನೂ ಕೂಡ ಬೆಳೆ ಪರಿಹಾರ ಪಟ್ಟಿಗೆ ಸೇರಿಸಬೇಕು ಎಂದು ನಾಪೋಕ್ಲು ವ್ಯಾಪ್ತಿಯ ಬೆಳೆಗಾರರು ನಾಡ ಕಚೇರಿಗೆ ತೆರಳಿ ಕಂದಾಯ ಪರೀವೀಕ್ಷಕರನ್ನು ಒತ್ತಾಯಿಸಿದರು.
ಸರಕಾರಿ ಆದೇಶದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಕಾಳು ಮೆಣಸು ಉಪಬೆಳೆಯಾಗಿದೆ. ಮುಖ್ಯ ಬೆಳೆಯಾಗಿರುವ ಕಾಫಿ ಹೆಚ್ಚು ಮಳೆ ಸುರಿದ ಹಿನೆÀ್ನಲೆಯಲ್ಲಿ ಸಂಪೂರ್ಣವಾಗಿ ನೆಲಕಚ್ಚಿದೆ. ರೈತರ ಎಲ್ಲಾ ಬೆಳೆಗಳೂ ನಾಶಗೊಂಡಿವೆ. ಎಲ್ಲಾ ಬೆಳೆಗಳಿಗೂ ಸರಕಾರ ಪರಿಹಾರ ನೀಡಲು ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಬೆಳೆಗಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ `ಶಕ್ತಿ’ ಯೊಂದಿಗೆ ಮಾತನಾಡಿದ ಬೆಳೆಗಾರ ರಾದ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ನಾಪೋಕ್ಲು ವ್ಯಾಪ್ತಿಯ ಹಲವು ಗ್ರಾಮಗಳನ್ನು ಕಾಫಿ ಬೆಳೆ ಪರಿಹಾರ ಪಟ್ಟಿಯಿಂದ ಕೈಬಿಡಲಾಗಿದೆ. ಇದಕ್ಕೆ ಕಾಫಿ ಮಂಡಳಿ ಕಂದಾಯ ಇಲಾಖೆಗೆ ಕಾಫಿ ಬೆಳೆ ನಷ್ಟ ಗೊಂಡಿರುವ ಬಗ್ಗೆ ವರದಿ ನೀಡದಿರು ವುದೆ ಕಾರಣ. ಬೆಳೆಗಾರರೊಂದಿಗೆ ಕಾಫಿ ಮಂಡಳಿಯ ಅಧಿಕಾರಿಯನ್ನು ಭೇಟಿ ಮಾಡಿ ವರದಿ ನೀಡುವಂತೆ ಒತ್ತಾಯಿಸಲಾಗುವದು ಎಂದರು.
ಬಿದ್ದಾಟAಡ ಜಿನ್ನು ನಾಣಯ್ಯ ಮಾತನಾಡಿ ಬೆಳೆ ನಷ್ಟದಿಂದ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಬೆಳೆಗಾರರಾದ ಶಿವಚಾಳಿಯಂಡ ಜಗದೀಶ್, ಪಾಡಿಯಮ್ಮಂಡ ಮನು ಮಹೇಶ್, ತಿರೋಡಿರ ರಾಜಾ ಉತ್ತಯ್ಯ, ಬೊಟ್ಟೋಳಂಡ ರಮೇಶ್ ಮೊಣ್ಣಯ್ಯ ಮತ್ತಿತರರಿದ್ದರು.