ಸೋಮವಾರಪೇಟೆ, ನ. ೨೮: ವಿದ್ಯಾರ್ಥಿಗಳು ದೇಶದ ಆಸ್ತಿಯಾಗಿದ್ದು, ದೇಶ ಕಟ್ಟುವ ಕಾಯಕದಲ್ಲಿ ತೊಡಗಿಕೊಳ್ಳಬೇಕಿದೆ ಎಂದು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಬಿ.ಎಂ. ಪ್ರವೀಣ್‌ಕುಮಾರ್ ಹೇಳಿದರು.
ಯಡೂರಿನ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟಿçÃಯ ಸೇವಾಯೋಜನಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ರಾಷ್ಟಿçÃಯ ಸೇವಾ ಯೋಜನೆಯು ಸೇವೆ ಮಾಡುವ ವಿದ್ಯಾರ್ಥಿಗಳನ್ನು ರೂಪಿಸುವ ವೇದಿಕೆಯಾಗಿದ್ದು ವಿದ್ಯಾರ್ಥಿ ದಿಸೆಯಲ್ಲಿ ಅದರಲ್ಲಿ ತಮ್ಮನ್ನು ತೊಡಗಿಕೊಳ್ಳುವ ಮೂಲಕ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹೆಚ್.ಎನ್.ರಾಜು ವಹಿಸಿದ್ದರು. ಈ ಸಂದರ್ಭ ಕಾಲೇಜಿನ ರಾಷ್ಟಿçÃಯ ಸೇವಾಯೋಜನಾ ಘಟಕದ ಸಂಯೋಜಕರಾದ ಕೆ.ಹೆಚ್. ಧನಲಕ್ಷ್ಮಿ, ಆಂಗ್ಲ ವಿಭಾಗದ ಎಂ.ಎಸ್. ಶಿವಮೂರ್ತಿ, ಉಪನ್ಯಾಸಕರಾದ ಎಂಎಸ್.ಸುನಿಲ್, ಕೆ. ಪಾಪಣ್ಣ, ಎನ್.ಪಿ. ಧರ್ಮ, ಹೆಚ್.ಎ.ಶೈಲಾ, ಬಿ.ಜೆ. ಆಶಿಕ, ಡಿ.ಜಿ. ಸಂಗೀತ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.