ಕೂಡಿಗೆ, ನ. ೨೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿ ಅದೇರಿ ಹಿಲ್ಸ್ ಮತ್ತು ಓಡಿಪಿ ಸಂಸ್ಥೆಯ ವತಿಯಿಂದ ಕೋವಿಡ್ ನೆರವು ಪ್ರಯುಕ್ತ ಈ ವ್ಯಾಪ್ತಿಯ ನೋಂದಾ ಯಿತ ರೈತರಿಗೆ ಉಚಿತವಾಗಿ ಗೊಬ್ಬರ ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾನ್ ಡಿಗ್ರೀಸ್ ವಹಿಸಿದ್ದರು. ಉದ್ಘಾಟನೆಯನ್ನು ವಲಯ ಸಂಯೋಜಕಿ ಜಾಯ್ಸ್ಮೆನೇಜಸ್ ನೆರವೇರಿಸಿ ಯೋಜನೆ ಸದುಪಯೋಗಪಡಿಸಿಕೊಳ್ಳಲು ಮನವಿ ಮಾಡಿದರು.
ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯೆ ಜಯಾಶೀಲ, ಮಹಿಳಾ ಕಾರ್ಯಕರ್ತೆ ಸುಗುಣ, ಸ್ವಯಂ ಉದ್ಯೋಗ ಸಂಸ್ಥೆಯ ಅಧಿಕಾರಿ ಹರೀಶ್ ಮಾತಾನಾಡಿದರು. ಈ ಸಂದರ್ಭ ಗ್ರಾಮ ಪ್ರಮುಖರಾದ ಕೃಷ್ಣ, ಪ್ರಕಾಶ್ ಕುಮಾರ್, ಭವಾನಿ, ಚಂದ್ರಕಲಾ, ಸರೋಜ, ಕಾರ್ಯಕರ್ತರಾದ ವರದರಾಜ್ ದಾಸ್, ಮಮತಾ, ಸುಂದರ್ ಮೊದಲಾದವರು ಹಾಜರಿದ್ದರು.