ವೀರಾಜಪೇಟೆ, ನ. ೨೮: ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಎಸ್.ಎಸ್. ಕಲಾಸಂಗಮ ಏರ್ಪಡಿಸಿದ್ದ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೂಲತಃ ಅಮ್ಮತ್ತಿಯವರಾದ ಬೆಂಗಳೂರಿನಲ್ಲಿ ವಕೀಲೆ ವೃತ್ತಿಯಲ್ಲಿರುವ ಅಮೂಲ್ಯ ಸುಜಿತ್ ಅವರನ್ನು ಭರತನಾಟ್ಯ ಹಾಗೂ ಮಾಡಲಿಂಗ್ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ. ಮಹೇಶ್ವರ ಸ್ವಾಮೀಜಿಗಳು, ಗುರುರಾಜ್ ಹೊಸಕೋಟೆ, ಡಾ. ಸುಬ್ರಮಣ್ಯ ಶರ್ಮ, ಶಶಿಧರ್ ಕೋಟೆ, ಡಾ. ಸತ್ಯವತಿ ಬಸವರಾಜ್, ಸಂಗೀತ ಹೊಳ್ಳ, ಹೇಮಾ ಆನಂದ್, ಶಿವಕುಮಾರ್ ಬಿ.ಕೆ., ಡಾ. ಅಬ್ಬಾಸ್ ಮುಂತಾದ ಗಣ್ಯರು ಪಾಲ್ಗೊಂಡಿದ್ದರು.