ಸೋಮವಾರಪೇಟೆ, ನ.೨೮: ಸಮೀಪದ ಕೂತಿ ಗ್ರಾಮದ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಹುಣ್ಣಿಮೆಯ ನಂತರದ ಮೊದಲ ಶುಕ್ರವಾರ ವಿಶೇಷ ಕಾರ್ತಿಕ ಪೂಜೆ ನಡೆಯಿತು. ಬಾಳೆಯಿಂದ ಮಾಡಿದ ಕತ್ರಿಕೆ ಹಾಗೂ ಚೆಂಡು ಹೂವಿನಿಂದ ತಯಾರಿಸಿದ ಕಾರ್ತಿ (ಕಳಸ, ದೀಪ)ಯನ್ನಿಟ್ಟು ದೇವರಿಗೆ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭ ಗ್ರಾಮಾಧ್ಯಕ್ಷರಾದ ಹೆಚ್.ಡಿ. ಮೋಹನ್, ಕಾರ್ಯದರ್ಶಿ ವಿನೋದ್, ಕಿಶನ್, ಜಗದೀಶ್, ದಿನೇಶ್, ಗಣೇಶ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.