ಮಡಿಕೇರಿ, ನ.೨೮ : ಮಡಿಕೇರಿ ನಗರ ತುಳುವೆರ ಜನಪದ ಕೂಟದ ಮಹಿಳಾ ಘಟಕವನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಸಾವಿತ್ರಿ ಉದಯಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಚಿತ್ರಾವತಿ ಆಚಾರ್ಯ ಆಯ್ಕೆಯಾಗಿ ದ್ದಾರೆ. ಜನಪದ ಕೂಟದ ಜಿಲ್ಲಾಧ್ಯಕ್ಷ ಬಿ.ಬಿ.ಐತ್ತಪ್ಪ ರೈ ಅವರ ಅಧ್ಯಕ್ಷತೆಯಲ್ಲಿ ನಗರದ ಬಾಲಭವನದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಸುನೀತ ನಾರಾಯಣ, ಖಜಾಂಚಿಯಾಗಿ ಕವಿತಾ ಪ್ರಸಾದ್, ಕಾರ್ಯದರ್ಶಿಯಾಗಿ ದಿವ್ಯ ಶ್ರೀನಿವಾಸ್, ಸದಸ್ಯರುಗಳಾಗಿ ಅಕ್ಷತಾ ಶರತ್, ರಾಜೀವಿ ರಮೇಶ್, ಸುಜಾತ ಗಣೇಶ್, ಸುಮಾ ಅಶೋಕ, ವಿಶಾಲ ರಮೇಶ್, ಪ್ರೇಮ ಕುಮಾರಿ, ಶೀಲ, ಬಿಂದು ಹೇಮಂತ್, ಲಕ್ಷಿö್ಮÃ ಅಚ್ಚುತ, ದೀಪಿಕಾ ಅರುಣ, ಭವಾನಿ ಶೋಭ, ಮಾಲತಿ ರವಿ ಹಾಗೂ ಪ್ರತಿಭಾ ಅರುಣ ಶೆಟ್ಟಿ ಅವರುಗಳನ್ನು ನೇಮಕ ಮಾಡಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿ ಬಿ.ಬಿ.ಐತ್ತಪ್ಪ ರೈ ಮಹಿಳಾ ಘಟಕ ರಚನೆಯ ಮೂಲಕ ತುಳುವೆರ ಜನಪದ ಕೂಟವನ್ನು ಮತ್ತಷ್ಟು ಬಲಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದರು.