ಸೋಮವಾರಪೇಟೆ,ನ.೨೮: ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ. ೬೫.೮೨ ಲಕ್ಷ ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ. ೧೮ ರಷ್ಟು ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ. ಹೆಚ್. ವಿಶ್ವನಾಥ ರಾಜೇಅರಸ್ ತಿಳಿಸಿದರು.
ಸಂಘದ ರೈತ ಸಭಾಂಗಣದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಸಂಘವು ವರದಿ ಸಾಲಿನಲ್ಲಿ ರೂ. ೯೭ ಕೋಟಿ ವಹಿವಾಟು ನಡೆಸಿದೆ. ಕಳೆದ ಸಾಲಿನಲ್ಲಿ ನೀಡಿದ ಕೆ.ಸಿ.ಸಿ. ಸಾಲವನ್ನು ಶೇ. ೧೦೦ ರಷ್ಟು ವಸೂಲಾತಿ ಮಾಡಲಾಗಿದೆ ಎಂದರು.
ಸAಘದಲ್ಲಿ ೧೧೫ ಸ್ವಸಹಾಯ ಗುಂಪುಗಳು ವ್ಯವಹರಿಸುತ್ತಿದ್ದು, ವರದಿ ಸಾಲಿನಲ್ಲಿ ವಿತರಿಸಿದ ಸ್ವಸಹಾಯ ಗುಂಪು ಸಾಲವನ್ನು ಶೇ. ೧೦೦ ರಷ್ಟು ವಸೂಲಾತಿ ಮಾಡಲಾಗಿದೆ. ವರದಿ ವರ್ಷ ೮೩ ಸ್ವ ಸಹಾಯ ಗುಂಪುಗಳಿಗೆ ರೂ. ೩.೭೬ ಕೋಟಿ ಸಾಲ ವಿತರಿಸಲಾಗಿದೆ. ಸದಸ್ಯರು ಸಂಘದೊAದಿಗೆ ನಿಕಟ ಸಂಪರ್ಕವನ್ನಿರಿಸಿಕೊAಡು, ತಾವು ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿಸಿದಲ್ಲಿ ಇನ್ನೂ ಹೆಚ್ಚಿನ ಲಾಭಗಳಿಸಲು ಸಾಧ್ಯ ಎಂದು ಹೇಳಿದರು.
ಇದೇ ಸಂದರ್ಭ ಪ್ರಥಮವಾಗಿ ಕೆ.ಸಿ.ಸಿ. ಸಾಲ ಮರು ಪಾವತಿಸಿದ ಸಣ್ಣ ಹಾಗೂ ದೊಡ್ಡ ರೈತರಿಗೆ ಹಾಗೂ ಸ್ವಸಹಾಯ ಗುಂಪುಗಳಿಗೆ ಬಹುಮಾನವನ್ನು ವಿತರಿಸಲಾಯಿತು. ನಂತರ ಎಸ್.ಎಸ್.ಎಲ್.ಸಿ. ಪಿಯುಸಿ ಹಾಗೂ ಪದವಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಮಹಾಸಭೆಯಲ್ಲಿ ಉಪಾಧ್ಯಕ್ಷ ಕೆ. ಪಿ. ರೋಷನ್, ನಿರ್ದೇಶಕರುಗಳಾದ ಹೆಚ್. ಬಿ. ಶಿವಕುಮಾರ್, ಡಿ.ಎಸ್. ಚಂಗಪ್ಪ, ಎಲ್.ಎಂ. ರಾಜೇಶ್, ಡಿ.ಕೆ. ಪೂವಯ್ಯ, ಡಿ.ಸಿ. ಸಬಿತ, ಎಸ್.ಜಿ. ರಾಣಿ, ಬಿ.ಸಿ.ಸುನಿಲ್, ಹೆಚ್. ಜೆ. ಬಸಪ್ಪ, ಎಸ್.ಕೆ. ರಘು ಹಾಗೂ ಮೇಲ್ವಿಚಾರಕ ಟಿ.ಆರ್. ಪವನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಎ. ಡಿಕ್ಕಿರಾಜು ಉಪಸ್ಥಿತರಿದ್ದರು.