ಶನಿವಾರಸಂತೆ, ನ. ೨೮: ಸಮೀಪದ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರುಗುಂದ - ನಿಲುವಾಗಿಲು ಗ್ರಾಮಗಳು ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆಯಾಗಿದ್ದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಎರಡೂ ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ಶ್ರಮದಾನ ಮಾಡಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಸಿ. ಸುರೇಶ್, ಬಿಲ್ ಸಂಗ್ರಾಹಕ ಬಿ.ಎಂ. ನಿಜಗುಣ್, ಡಾಟಾ ಎಂಟ್ರಿ ಆಪರೇಟರ್ ಪಾವನಾ, ಸಿಬ್ಬಂದಿ ಲೀಲಾವತಿ, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಅಲ್ತಾಪ್, ಪ್ರವೀಣ್ ಕುಮಾರ್, ರೂಪಾ, ಸುರೇಂದ್ರ ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.