ಶನಿವಾರಸಂತೆ, ನ. ೨೭: ಸಮೀಪದ ಗಡಿಭಾಗ ಹೊಸೂರು ಗ್ರಾಮದ ಬೆಟ್ಟದ ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಜೆಸಿಐ ಹೊಸೂರು ಬಸವೇಶ್ವರ ವತಿಯಿಂದ ತಾ. ೨೯ ರಂದು (ನಾಳೆ) ಬಸವೇಶ್ವರ ಸ್ವಾಮಿಯ ಕೌಟೇಕಾಯಿ ಜಾತ್ರೆ ನಡೆಯಲಿದೆ.

ಜಾತ್ರೆ ಸಮಾರಂಭದಲ್ಲಿ ದಾನಿಗಳಿಗೆ ಸನ್ಮಾನ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಸಮೂಹ ನೃತ್ಯ ಮತ್ತು ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.