ಮಡಿಕೇರಿ, ನ. ೨೭: ರಾಷ್ಟçವು ಸಮಸ್ಯೆಯನ್ನು ಎದುರಿಸುತ್ತಿರುವಾಗ ಹಾಗೂ ಯುದ್ಧ ಸಂದರ್ಭಗಳಲ್ಲಿ ಮಾತ್ರ ಜನರು ಸೈನಿಕರ ಸ್ಮರಣೆ ಮಾಡುತ್ತಾರೆ. ನಂತರ ಮರೆತುಬಿಡುತ್ತಾರೆ. ಇದು ಆಗಬಾರದು. ಪ್ರತಿನಿತ್ಯ ಸೈನಿಕರ ಸೇವೆ ಯನ್ನು ಗುರುತಿಸಿ ಗೌರವಿಸಬೇಕೆಂದು ದಿವಂಗತ ಜನರಲ್ ಕೆ.ಎಸ್ ತಿಮ್ಮಯ್ಯ ಅವರ ಮೊಮ್ಮಗ ಕೊಂಗೇಟಿರ ಸಿ. ಬೆಳ್ಯಪ್ಪ ಅವರು ಅಭಿಪ್ರ‍್ರಾಯಿಸಿದರು. ಇಂದು ನಗರದ ಜನರಲ್ ತಿಮ್ಮಯ್ಯ ಸಂಗ್ರಹಾಲಯಕ್ಕೆ ಭೇಟಿ ನೀಡಿದ ಅವರು ಮಾಧ್ಯಮದೊಂದಿಗೆ ಮಾತನಾಡಿದರು. ಸೈನಿಕರ ತ್ಯಾಗ, ಸೇವೆಗಳ ವರದಿಗಳಿಗೆ ಮಾಧ್ಯಮದವರು ಇನ್ನಷ್ಟೂ ಪ್ರಾತಿನಿಧ್ಯ ನೀಡಬೇಕು. ಇದರೊಂದಿಗೆ ಅವರುಗಳ ಕುಟುಂಬಗಳನ್ನೂ ಗುರುತಿಸಬೇಕು ಎಂದರು. ಸಂಗ್ರಹಾಲಯಕ್ಕೆ ತಿಮ್ಮಯ್ಯ ಕುಟುಂಬದಿAದ ಬಹಳಷ್ಟು ಕೊಡುಗೆ ನೀಡಲಾಗಿದೆ. ಮತ್ತಷ್ಟು ವಸ್ತುಗಳನ್ನು, ಯುದ್ಧ ಸಂಬAಧಿತ ಪರಿಕರಗಳನ್ನು ಒದಗಿಸಲು ಸರಕಾರವೂ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಸಂಗ್ರಹಾಲಯದಲ್ಲಿನ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ಸ್ಮಾರಕದ ಮುಂದೆ ಗಿಡಗಳನ್ನು ನೆಟ್ಟ ಬೆಳ್ಳಿಯಪ್ಪ ಅವರು, ಯುದ್ಧದಲ್ಲಿ ಮಡಿದ ಸೈನಿಕರನ್ನು ನೆನಪಿಸಿಕೊಂಡರು. ಸಂಗ್ರಹಾಲಯ ನಿರ್ಮಾಣಕ್ಕೆ ಶ್ರಮಿಸಿದ ಮಾಜಿ ಸೈನಿಕರು ಸೇರಿದಂತೆ ಸರಕಾರಕ್ಕೂ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ, ಇಲಾಖೆಯ ಮಣಜೂರು ಮಂಜುನಾಥ್, ಬೆಳ್ಯಪ್ಪ ಅವರ ಗೆಳೆಯ ಉದ್ಯಮಿ ಸಂಜಯ್ ಕಂಬಿರAಡ ನಿತಿನ್ ಗಣಪತಿ ಹಾಗೂ ಇತರರು ಇದ್ದರು. ಜಿ.ಟಿ ತಿಮ್ಮಯ್ಯ ಅವರು ಜನರಲ್ ತಿಮ್ಮಯ್ಯ ಅವರ ಜೀವನ ಹಾಗೂ ಸಂಗ್ರಹಾಲಯದಲ್ಲಿನ ಎಲ್ಲಾ ವಸ್ತುಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಸಂಗ್ರಹಾಲಯ ವೀಕ್ಷಣೆಗೂ ಮುನ್ನ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರನ್ನು ಭೇಟಿ ಮಾಡಿದ ಬೆಳ್ಯಪ್ಪ ಅವರು ಸಂಗ್ರಹಾಲಯದ ಅಭಿವೃದ್ಧಿ ಸಂಬAಧಿಸಿದAತೆ ಚರ್ಚಿಸಿದರು. ಸಂಗ್ರಹಾಲಯವನ್ನು ಅಭಿವೃದ್ಧಿ ಪಡಿಸುವಲ್ಲಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಸತೀಶ ಅವರು ಭರವಸೆ ನೀಡಿದರು.