ನಾಪೋಕ್ಲು, ನ. ೨೬: ೨೦೨೦-೨೧ರ ಬೆಳೆ ನಷ್ಟ ಪರಿಹಾರಕ್ಕೆ ಮಡಿಕೇರಿ ತಾಲ್ಲೂಕುವಿನ ನಾಪೋಕ್ಲು ಹೋಬಳಿ ದೊಡ್ದಪುಲಿಕೋಟು ಗ್ರಾಮವನ್ನು ಕೈಬಿಟ್ಟಿರುವ ಬಗ್ಗೆ ಗ್ರಾಮದ ಮಾರುತಿ ಯುವಕ ಸಂಘ ಮತ್ತು ಬೆಳೆಗಾರರ ಹೋರಾಟ ಸಮಿತಿಯವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬೆಳೆಗಾರರು ಸಭೆ ನಡೆಸಿ ಮಳೆಯಿಂದ ಉಂಟಾದ ಬೆಳೆ ನಷ್ಟಕ್ಕೆ ಪರಿಹಾರವನ್ನು ಕೊಡಬೇಕಾಗಿ ಜಿಲ್ಲಾಡಳಿತವನ್ನು ಒತ್ತಾಯಿದ್ದಾರೆ. ಈ ಸಂದರ್ಭದಲ್ಲಿ ಮಾರುತಿ ಯುವಕ ಸಂಘದ ಅಧ್ಯಕ್ಷ ಮುಕ್ಕಾಟ್ಟಿರ ಚಿಂಗಪ್ಪ, ಬೆಳೆಗಾರರ ಸಂಘದ ಅಧ್ಯಕ್ಷ ಕರವಂಡ ಸೋಮಣ್ಣ, ಲವ ನಾಣಯ್ಯ, ಅಪ್ಪಣ್ಣ, ಸಂತೋಷ್, ಸದಾ, ಸೋಮಯ್ಯ, ಮಾಚಯ್ಯ, ಬೋಪಣ್ಣ, ಪೊನ್ನಣ್ಣ, ಸತೀಶ, ಮುಕ್ಕಾಟಿರ ಸುತನ್, ಸುಬ್ರಮಣಿ, ಬೆಳ್ಳಿಯಪ್ಪ, ಸುಮನ್, ಪೆಬ್ಬಟ್ಟಿರ ನಂದ, ಶರಣು, ಕಾರ್ತಿಕ್ ಉಪಸ್ಥಿತರಿದ್ದರು.