ಮಡಿಕೇರಿ, ನ. ೨೬: ರಾಷ್ಟಿçÃಯ ಆರೋಗ್ಯ ಅಭಿಯಾನದಡಿ “ಕೇರ್ ಕಂಪ್ಯಾನಿಯನ್” ಕಾರ್ಯಕ್ರಮವನ್ನು ‘ಯೋಸೈಡ್ ಇನ್ನೋವೇಷನ್’ ಸಂಸ್ಥೆಯೊAದಿಗಿನ ಒಡಂಬಡಿಕೆಯ ಪ್ರಕಾರ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಅನುಷ್ಠಾನಗೊಳಿಸಿದ್ದು, ಪರಿಣಾಮಕಾರಿಯಾದ ಬೆಳವಣಿಗೆ ಕಂಡುಕೊಳ್ಳಲಾಗಿದೆ. “ಕೇರ್ ಕಂಪ್ಯಾನಿಯನ್” ಕಾರ್ಯಕ್ರಮವು ತಾಯಿ-ಮಗುವಿನ ಹಾಗೂ ಅವರ ಪಾಲನೆದಾರರಾದ ಕುಟುಂಬ ಸದಸ್ಯರಿಗೆ ಪ್ರಸವ ಪೂರ್ವ, ಪ್ರಸವ ನಂತರದ ಆರೈಕೆ ಮತ್ತು ಸುರಕ್ಷಿತ ಮಾತೃತ್ವ ಒದಗಿಸುವಲ್ಲಿ ಕುಟುಂಬದ ಪಾತ್ರದ ಬಗ್ಗೆ ಶಿಸ್ತುಬದ್ಧ ಮತ್ತು ಪರಿಣಾಮಕಾರಿಯಾದ ಆರೋಗ್ಯ ಶಿಕ್ಷಣ ನೀಡುವ ಗುರಿ ಹೊಂದಿದೆ.

ಈ “ಕೇರ್ ಕಂಪ್ಯಾನಿಯನ್ ಕಾರ್ಯಕ್ರಮವನ್ನು” ರಾಜ್ಯದ ಲಕ್ಷಾö್ಯ ಅನುಷ್ಠಾನಿತ ವಿವಿಧ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿಯೂ ಅನುಷ್ಠಾನಗೊಳಿಸುವ ಸದುದ್ದೇಶ ಹೊಂದಿದೆ.

ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಯೋಸೈಡ್ ಇನ್ನೋವೇಷನ್ (ನೂರಾ ಹೆಲ್ತ್ ಇಂಡಿಯಾ) ಸಂಸ್ಥೆಯ ಸಹಯೋಗದೊಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅನುಷ್ಠಾನಗೊಳ್ಳುತ್ತಿದೆ. ಈ ಕೇರ್ ಕಂಪ್ಯಾನಿಯನ್ ಕಾರ್ಯಕ್ರಮವು ಆರೋಗ್ಯ ಕೇಂದ್ರ ಗೋಣಿಕೊಪ್ಪದಲ್ಲಿ ಜಿಲ್ಲಾ ಆರೋಗ್ಯ ಆರ್‌ಸಿಹೆಚ್ ಅಧಿಕಾರಿಗಳು ಕುಟುಂಬ ಕಲ್ಯಾಣ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು, ಹಾಗೂ ಮುಖ್ಯ ವೈದ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ಚಾಲನೆಗೊಂಡಿತು.