ಮುಳ್ಳೂರು, ನ. ೨೬: ಕೊಡಗಿನಲ್ಲಿ ಅಕಾಲಿಕ ಮಳೆಗೆ ಕಾಫಿ ಮತ್ತು ಕಾಳು ಮೆಣಸು ಬೆಳೆ ಹಾನಿಯಾಗಿರುವ ಜೊತೆಯಲ್ಲಿ ಅಷ್ಟೇ ಪ್ರಮಾಣದಲ್ಲಿ ಗದ್ದೆಯಲ್ಲಿ ಬೆಳೆಯುವ ಅತ್ಯಂತ ಪ್ರಮುಖ ಬೆಳೆಯಾದ ಭತ್ತದ ಬೆಳೆ ಮತ್ತು ತೋಟದಲ್ಲಿ ಬೆಳೆದ ಪರ್ಯಾಯ ಬೆಳೆಗಳಿಗೂ ಹಾನಿಯಾಗಿದ್ದು, ಸರಕಾರ ಭತ್ತದ ಬೆಳೆಗೂ ಪರಿಹಾರ ನೀಡಬೇಕೆಂದು ಹಂಡ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಹಾಗೂ ರೈತ ವೀರೇಂದ್ರ ಕುಮಾರ್ ಆಗ್ರಹಿಸಿದ್ದಾರೆ.
ರೈತರ ಪರವಾಗಿ ಶನಿವಾರಸಂತೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಈ ವರ್ಷ ನಿರಂತರವಾಗಿ ಮಳೆಯಾಗುತ್ತಿದ್ದು, ತೋಟದ ಬೆಳೆಯಾದ ಕಾಫಿ ಮತ್ತು ಕಾಳು ಮೆಣಸು ಬೆಳೆಗೆ ಹಾನಿಯಾಗಿದೆ. ಈ ಸಂಬAಧ ಸರಕಾರ ಬೆಳೆ ಹಾನಿಗೊಳಗಾದ ರೈತರಿಂದ ಪರಿಹಾರಕ್ಕಾಗಿ ಅರ್ಜಿ ಸ್ವೀಕರಿಸುತ್ತಿರುವುದು ಸರಿಯಷ್ಟೆ. ಆದರೆ ಸರಕಾರ ಮತ್ತು ಸಂಬAಧ ಪಟ್ಟ ಇಲಾಖೆ ಕಾಫಿ ಮತ್ತು ಕಾಳು ಮೆಣಸು ಬೆಳೆ ಹಾನಿಗೆ ಮಾತ್ರ ಪರಿಹಾರ ನೀಡುತ್ತಿದೆ, ಕೊಡಗಿನಲ್ಲಿ ಗದ್ದೆಯಲ್ಲಿ ಬೆಳೆಯುವ ಭತ್ತ ಅತ್ಯಂತ ಪ್ರಮುಖ ಮತ್ತು ಜೀವನಾಧಾರಿತ ಬೆಳೆಯಾಗಿದೆ. ಈಗ ಅಕಾಲಿಕ ಮಳೆಯಿಂದ ಫಸಲಿಗೆ ಬಂದಿರುವ ಭತ್ತದ ಬೆಳೆಯನ್ನು ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ, ಪ್ರತಿದಿನ ಮಳೆ ಬರುತ್ತಿರುವುದರಿಂದ ಗದ್ದೆಯಲ್ಲಿ ನೀರು ತುಂಬಿಕೊAಡು ಫಸಲಿಗೆ ಬಂದಿರುವ ಭತ್ತ ನೀರಿನೊಳಗೆ ಕೊಳೆತು ಹೋಗುತ್ತಿದ್ದು ಇದರಿಂದ ಭತ್ತ ಬೆಳೆಗೂ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಆದರೆ ಸರಕಾರ, ಸಂಬAಧಪಟ್ಟ ಇಲಾಖೆ ಹಾನಿಗೊಳಗಾದ ಭತ್ತದ ಬೆಳೆಗೆ ರೈತರಿಂದ ಅರ್ಜಿ ಸ್ವೀಕರಿಸುತ್ತಿಲ್ಲ ಎಂದರು. ರೈತರು ತೋಟದಲ್ಲಿ ಬಾಳೆ, ನಿಂಬೆ, ಕಿತ್ತಳೆ ಬೆಳೆ ಸೇರಿದಂತೆ ಗದ್ದೆಗಳಲ್ಲಿ ಶುಂಠಿ, ಸಿಹಿ ಗೆಣಸು ಮುಂತಾದ ಪರ್ಯಾಯ ಬೆಳೆಗಳನ್ನು ಬೆಳೆದಿದ್ದು ಅಕಾಲಿಕ ಮಳೆಗೆ ಪರ್ಯಾಯ ಬೆಳೆಗಳು ಹಾನಿಗೊಳಗಾಗಿವೆ. ಈ ನಿಟ್ಟಿನಲ್ಲಿ ಸರಕಾರ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ಭತ್ತ ಹಾಗೂ ಇತರ ಪರ್ಯಾಯ ಬೆಳೆಗಳಿಗೂ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಹಂಡ್ಲಿ ಗ್ರಾ.ಪಂ.ಮಾಜಿ ಅಧ್ಯಕ್ಷ ಎಚ್.ಎನ್.ಸಂದೀಪ್ ಮಾತನಾಡಿ, ರೈತರು ನಿರಂತರ ಮಳೆಗೆ ಹಾನಿಗೊಳಗಾದ ಭತ್ತದ ಬೆಳೆಗೆ ಪರಿಹಾರಕ್ಕಾಗಿ ಅರ್ಜಿ ಹಾಕಲು ಹೋದಾಗ ಇಲಾಖೆ ಅಧಿಕಾರಿಗಳು ಕಾಫಿ ಮತ್ತು ಕಾಳು ಮೆಣಸು ಬೆಳೆ ಹಾನಿಯ ಅರ್ಜಿ ಸ್ವೀಕರಿಸುತ್ತಿದ್ದು, ಭತ್ತದ ಬೆಳೆ ಹಾನಿ ಅರ್ಜಿ ಸ್ವೀಕರಿಸುತ್ತಿಲ್ಲ. ಈ ನಿಟ್ಟಿನಲ್ಲಿ ಶಾಸಕರು, ಸಂಸದರು, ಸಂಬAಧ ಪಡುವ ಇಲಾಖೆ ಅಧಿಕಾರಿಗಳು ನಿರಂತರ ಮಳೆಗೆ ಹಾನಿಯಾಗಿರುವ ಭತ್ತ ಹಾಗೂ ಇತರೆ ಪರ್ಯಾಯ ಬೆಳೆಗಳಿಗೂ ಪರಿಹಾರ ನೀಡಲು ಘೋಷಣೆ ಮಾಡುವಂತೆ ಎಲ್ಲಾ ಭತ್ತ ಬೆಳೆಯುವ ರೈತರ ಪರವಾಗಿ ಆಗ್ರಹಿಸಿದರು. ಗೋಷ್ಠಿಯಲ್ಲಿ ಪ್ರಾ.ಕೃ.ಪ.ಸ. ಸಂಘದ ನಿರ್ದೇಶಕ ಕೆ.ಎನ್. ಮಧು, ರೈತ ಪ್ರಮುಖರಾದ ಕೆ.ಸಿ.ಮೂರ್ತಿ, ಕೆ.ಡಿ.ವೇದಕುಮಾರ್ ಹಾಜರಿದ್ದರು.
-ಭಾಸ್ಕರ್ ಮುಳ್ಳೂರು