ಗೋಣಿಕೊಪ್ಪ ವರದಿ, ನ. ೨೬ : ಜೇನು ನೊಣಗಳ ಆಹಾರ ಸಸ್ಯಗಳು ಹಾಗೂ ಕೊಡಗಿನ ಜೇನು ತುಪ್ಪದಲ್ಲಿನ ಪರಾಗ ಕಣಗಳ ಬಗ್ಗೆ ಅಧ್ಯಯನದಲ್ಲಿ ಸಾಧನೆ ಮಾಡಿರುವ ಚೆಪ್ಪುಡೀರ ಎನ್. ನಿಧಿ ಅವರಿಗೆ ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾಲಯದ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪ್ರದಾನ ಮಾಡಲಾಯಿತು.
ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿ ಕುಲಾಧಿಪತಿ ಥಾವರಚಂದ್ ಗೆಹಲೋತ್ ಪ್ರದಾನ ಮಾಡಿದರು. ಸಂಶೋಧನಾ ಮಾರ್ಗದರ್ಶಿ ಡಾ. ಆರ್. ಎನ್. ಕೆಂಚರೆಡ್ಡಿ ಇದ್ದರು.
ಇವರ ಸಂಶೋಧನೆಗೆ ಡಾ. ಆರ್. ಎನ್. ಕೆಂಚರೆಡ್ಡಿ ಮಾರ್ಗದರ್ಶನ ನೀಡಿದ್ದರು. ಇವರು ಮತ್ತೂರು ಚೆಪ್ಪುಡೀರ ನಟೇಶ್, ಕಾವೇರಮ್ಮ ದಂಪತಿ ಪುತ್ರಿ.