ನಾಪೋಕ್ಲು, ನ. ೨೬: ಸಮೀಪದ ಹೊದವಾಡ ರಾಫೇಲ್ಸ್ ಇಂಟರ್ ನ್ಯಾಷನಲ್ ಕಾಲೇಜಿನಲ್ಲಿ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜಿನ ವಾಲಿಬಾಲ್ ಪಂದ್ಯಾಟ ಜರುಗಿತು.

ಮುಖ್ಯ ಅತಿಥಿಯಾಗಿ ಆಗಮಿಸಿ ಪಂದ್ಯಾಟ ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಎಫ್.ಎಂ.ಸಿ. ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಪುಷ್ಪ ಕುಟ್ಟಣ್ಣ ಅವರು ಮಕ್ಕಳ ಪ್ರಯಾಣ ಬಹಳ ದೂರವಿದೆ, ಕ್ರೀಡೆಯಲ್ಲಿ ಮಾತ್ರ ತೊಡಗಿಸಿಕೊಂಡರೆ ಸಾಲದು ಬದಲಾಗಿ ಓದಿನಲ್ಲೂ ತಮ್ಮನ್ನು ತೊಡಗಿಸಿಕೊಳ್ಳ ಬೇಕೆಂದು ಕಿವಿಮಾತು ಹೇಳಿದರು. ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಜೀವನದಲ್ಲಿ ಯಶ ಸಾಧಿಸಬೇಕೆಂದರು.

ಅತಿಥಿಯಾಗಿ ಆಗಮಿಸಿದ್ದ ವಕೀಲ ಕುಂಞ ಅಬ್ದುಲ್ಲ, ಕಾಲೇಜಿನ ಟ್ರಸ್ಟಿ ಮೆಹಬೂಬ್ ಸಾಬ್ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಉದ್ಘಾಟನೆ ಪಂದ್ಯಾಟ ರಾಜರಾಜೇಶ್ವರಿ ಮಡಿಕೇರಿ ಮತ್ತು ಮದೆನಾಡು ಕಾಲೇಜು ತಂಡಗಳ ನಡುವೆ ನಡೆಯಿತು.

ಗ್ರಾಮ ಪಂಚಾಯಿತಿ ಸದಸ್ಯ ಹೆಚ್.ಎ. ಹಂಸ, ಮೊಯಿದು, ಇದ್ದರು. ಕಾಲೇಜಿನ ಪ್ರಾಂಶುಪಾಲ ತನ್ವೀರ್ ಪ್ರಾಸ್ತವಿಕವಾಗಿ ಮಾತನಾಡಿದರು.

ದೇಚಮ್ಮ ತಂಡದಿAದ ಪ್ರಾರ್ಥನೆ, ಹೇಮಾವತಿ ಸ್ವಾಗತಿಸಿ, ದೀಕ್ಷಿತಾ ವಂದಿಸಿದರು.