ಸಿದ್ದಾಪುರ, ನ. ೨೬: ಅಮ್ಮತ್ತಿ ತ್ರೀ ವೀಲ್ ಕ್ರಿಕೆರ‍್ಸ್ ವತಿಯಿಂದ ಪ್ರಥಮ ವರ್ಷದ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಆಟೋ ಚಾಲಕರಿಗಾಗಿ ಏರ್ಪಡಿಸಲಾಗಿದೆ. ಡಿಸೆಂಬರ್ ೧೦ ರಿಂದ ೧೨ ರವರೆಗೆ ಅಮ್ಮತ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಂದ್ಯಾಟ ನಡೆಯಲಿದೆ. ಪಂದ್ಯಾವಳಿಯು ವೀರಾಜಪೇಟೆ ತಾಲೂಕು ಮಟ್ಟದ ಆಟೋ ಚಾಲಕರಿಗೆ ಮಾತ್ರ ಸೀಮಿತವಾಗಿದೆ. ಪಂದ್ಯದಲ್ಲಿ ವಿಜೇತರಾದವರಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನವನ್ನು ನೀಡಲಾಗುವುದು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ೯೪೮೦೬೩೫೦೪೬, ೭೨೫೯೨೬೬೯೪೨ನ್ನು ಸಂಪರ್ಕಿಸಬಹುದಾಗಿದೆ.