ಚೆಟ್ಟಳ್ಳಿ, ನ. ೨೪: ಕರ್ನಾಟಕ ಕೇರಳ ಗಡಿಯಾದ ಮಾಕುಟ್ಟ ಸಂರಕ್ಷಿತಾ ಅರಣ್ಯದ ಕೆರೆಟಿ ಮತ್ತು ಊರುಟಿ ಎಂಬಲ್ಲಿ ಲೋಡುಗಟ್ಟಲೆ ತ್ಯಾಜ್ಯ ಸುರಿಯಲಾಗಿದೆ. ಇಷ್ಟೊಂದು ಮಟ್ಟದ ತ್ಯಾಜ್ಯಗಳನ್ನು ನೆರೆಯ ಕೇರಳ ರಾಜ್ಯದಿಂದ ತಂದು ಸುರಿಯಲಾಗಿದೆ ಎಂಬ ವದಂತಿ ಸಾರ್ವಜನಿಕ ವಲಯದಲ್ಲಿ ಬಲವಾಗಿ ಹಬ್ಬಿದೆ.

ಈ ತ್ಯಾಜ್ಯವನ್ನು ಹಲವಾರು ತಿಂಗಳುಗಳಿAದ ತಂದು ಸುರಿಯ ಲಾಗುತ್ತಿದ್ದರು ಮಾಕುಟ್ಟ ಗಡಿಯಲ್ಲಿರುವ ಪೊಲೀಸರಾಗಲಿ ಅಥವಾ ಅರಣ್ಯ ಇಲಾಖೆಯವರು ಆಗಲಿ ಇದರ ಬಗ್ಗೆ ಚಕಾರವೆತ್ತುತ್ತಿಲ್ಲ. ಇದು ಅವರ ಕಣ್ಣಿಗೆ ಬಿದ್ದಿಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆ.

ಅದು ಅಲ್ಲದೆ ಕೇರಳ ರಾಜ್ಯದಿಂದ ಬೀದಿ ನಾಯಿಗಳನ್ನು ಹಿಡಿದು ಅರಣ್ಯದೊಳಗೆ ಬಿಡಲಾಗಿದೆ, ಅಲ್ಲಿನ ವನ್ಯಪ್ರಾಣಿಗಳನ್ನು ಹಿಡಿದು ನಾಯಿಗಳು ತಿನ್ನುತ್ತಿದ್ದು ಅರಣ್ಯ ಇಲಾಖೆಯವರು ಇದರ ಬಗ್ಗೆ ಮೌನವಹಿಸಿದ್ದಾರೆ.

ಅದು ಅಲ್ಲದೆ ಕಾಡು ಪ್ರಾಣಿಗಳು ಅಲ್ಲಿ ಸುರಿದ ತ್ಯಾಜ್ಯಗಳನ್ನು ತಿಂದು ಅಳಿವಿನಂಚಿಗೆ ಸರಿಯುತ್ತಿದೆ.

ಇದೇ ಮಾರ್ಗವಾಗಿ ಅರಣ್ಯ ಅಧಿಕಾರಿಗಳು ನಿರಂತರ ಸಂಚಾರ ಮಾಡುತ್ತಿದ್ದು ಅವರ ಕಣ್ಣಿಗೆ ಇದು ಬಿದ್ದಿಲ್ಲವೇ, ಬಿದ್ದರೂ ಜಾಣ ಮೌನವೇಕೆ ಎಂಬುದು ಸಾರ್ವಜನಿಕ ವಲಯದಲ್ಲಿ ಮೂಡಿದ ಪ್ರಶ್ನೆ. ಸರಕಾರದಿಂದ ನಿರ್ಮಿಸಲಾಗಿರುವ ತಪಾಸಣಾ ಕೇಂದ್ರ ಕೇವಲ ದುಡ್ಡು ಮಾಡುವುದಕ್ಕಾಗಿಯೇ ಎಂಬುದು ಬಲ್ಲವರ ಪ್ರಶ್ನೆ.

ತ್ಯಾಜ್ಯಗಳಲ್ಲಿ ಮಧ್ಯದ ಬಾಟಲಿಗಳು, ಕೋಳಿ ತ್ಯಾಜ್ಯಗಳು ಮಾಕುಟ್ಟ ಮಾರ್ಗವಾಗಿ ಹೋಗುವ ರಸ್ತೆಗೆ ಬದಿಯಲ್ಲಿರುವ ಕೆರೆಟಿ ಹಾಗೂ ಉರುಟಿ ಎಂಬ ಅರಣ್ಯದ ಬದಿಯಲ್ಲಿ ಟನ್ನುಗಟ್ಟಲೆ ಸುರಿಯಲಾಗಿದೆ. ಇನ್ನಾದರೂ ಇದಕ್ಕೆ ಸಂಬAಧಪಟ್ಟ ಅರಣ್ಯ ಇಲಾಖೆಯವರು ಆಗಲಿ ಅಥವಾ ಪೊಲೀಸರು ಆಗಲಿ ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಂಡು ವನ್ಯಜೀವಿಗಳನ್ನು ಹಾಗೂ ಮೀಸಲು ಅರಣ್ಯವನ್ನು ಸಂರಕ್ಷಿಸಬೇಕೆAದು ಸಾರ್ವಜನಿಕರು ಆಗ್ರಹಿಸಿದ್ದಾರೆ. - ಪಪ್ಪು ತಿಮ್ಮಯ್ಯ