ಮಡಿಕೇರಿ, ನ. ೨೪: ಮಂಗಳೂರು ವಿಶ್ವ ವಿದ್ಯಾನಿಲಯದ ಅಧೀನದಲ್ಲಿರುವ ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠದ ಸಲಹಾ ಸಮಿತಿಯ ಪುನರ್ ರಚನೆ ಮಾಡಲಾಗಿದ್ದು, ಕೊಡಗು ಜಿಲ್ಲೆಯಿಂದ ನಾಲ್ವರು ನೇಮಕಗೊಂಡಿದ್ದಾರೆ.
ವಿವಿಯ ಕುಲಪತಿಗಳು ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಕುಲ ಸಚಿವರು ಸದಸ್ಯರಾಗಿ, ಹಣಕಾಸು ಅಧಿಕಾರಿ ಖಾಯಂ ಆಹ್ವಾನಿತರಾಗಿರುತ್ತಾರೆ.
ಸಮಿತಿ ಸದಸ್ಯರುಗಳಾಗಿ ಬೊಳ್ಳಜಿರ ಬಿ. ಅಯ್ಯಪ್ಪ, ಡಾ. ಪುಷ್ಪ ಕುಟ್ಟಣ್ಣ, ಡಾ. ಪಾರ್ವತಿ ಅಪ್ಪಯ್ಯ, ಟಿ.ಎ. ಕಿಶೋರ್ ಕುಮಾರ್ ನೇಮಕಗೊಂಡಿದ್ದಾರೆ.