ಮಡಿಕೇರಿ, ನ. ೨೪: ಬಲಗೈ ಮಾಡಿದ ದಾನ ಎಡಗೈಗೂ ಗೊತ್ತಾಗದ ಹಾಗೆ ಸೇವೆ ಮಾಡಿದರೆ ಅದು ಸಾರ್ಥಕ ಸೇವೆ ಎಂದು ರಾಷ್ಟಿçÃಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಂಘಚಾಲಕ ಡಾ.ವಾಮನ್ ಶೆಣೈ ಅವರು ಹೇಳಿದರು.

ಇಂದು ನಗರದ ಓಂಕಾರೇಶ್ವರ ದೇವಾಲಯ ಬಳಿ ಇರುವ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ತುರ್ತು ಚಿಕಿತ್ಸಾ ವಾಹನ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತುರ್ತು ಚಿಕಿತ್ಸಾ ವಾಹನವನ್ನು ದಾನ ಮಾಡಿದ ವ್ಯಕ್ತಿ ಹೆಸರು ಹೇಳಲು ಬಯಸಿಲ್ಲ. ಸೇವಾ ಭಾರತೀಯ ಕಾರ್ಯಕರ್ತರನ್ನು ಸಂಪರ್ಕಿಸಿ ಅವರ ಮೂಲಕ ವಾಹನವನ್ನು ಸಾರ್ವಜನಿಕರ ಹಿತಕ್ಕಾಗಿ ದಾನ ಮಾಡಿದ್ದಾರೆ. ಈ ಸಕಾರಾತ್ಮಕ ಚಿಂತನೆ ಇದ್ದರೆ ಮಾತ್ರ ನೀಡಿರುವ ಸೇವೆ ಸಾರ್ಥಕವಾಗುತ್ತದೆ ಎಂದರು. ಒಳ್ಳೆತನ ಎಂಬುದು ಹಿಂದೂ ಧರ್ಮದ ಚಿಂತನೆ. ಇದಕ್ಕೆ ಬಹಳಷ್ಟು ಉದಾಹರಣೆಗಳಿವೆ. ಭಾರತದಲ್ಲಿ ಇತರ ದೇಶಗಳಿಗಿಂತ ಸಾಕ್ಷರತೆ ಕಡಿಮೆ ಇದ್ದರೂ ಶಿಸ್ತು, ಒಳ್ಳೆತನ ಪ್ರದರ್ಶಿಸುವವರ ಸಂಖ್ಯೆ ಹೆಚ್ಚಿದೆ ಎಂದರು. ತುರ್ತು ಚಿಕಿತ್ಸಾ ವಾಹನ ಜಿಲ್ಲೆಯ ಗ್ರಾಮೀಣ ಭಾಗ ಹಾಗೂ ವನವಾಸಿ ಪ್ರದೇಶದ ಜನರಿಗೆ ಅನುಕೂಲವಾಗಲಿದೆ ಎಂದರು. ಸೇವಾ ಭಾರತಿಯಿಂದಲೆ ಇದರ ನಿರ್ವಹಣೆಯಾಗುವುದಾಗಿ ಮಾಹಿತಿ ನೀಡಿದರು.

ಜಿಲ್ಲಾ ಸಂಘ ಚಾಲಕ ಚಕ್ಕೇರ ಮನು ಕಾವೇರಪ್ಪ ಅವರು ಮಾತನಾಡಿ, ಜಿಲ್ಲೆಯಲ್ಲಿನ ಸಂಘದ ಕಾರ್ಯದಲ್ಲಿ ಹೊಸ ಮೆಟ್ಟಿಲು ಕ್ರಮಿಸಿದಂತಾಗಿದೆೆ. ವಿಕೋಪ ಸಂದರ್ಭ ಹಾಗೂ ಕೋವಿಡ್ ಸಂದರ್ಭ ಸ್ವಯಂ ಸೇವಕರ ಅವಿರತ ಶ್ರಮದಿಂದಾಗಿ ಸಂಕಷ್ಟದಲ್ಲಿದ್ದವರಿಗೆ ಸಹಾಯ ದೊರಕಿದೆ. ಇದೀಗ ಸೇವಾ ಭಾರತಿ ಮೂಲಕ ಆ್ಯಂಬುಲೆನ್ಸ್ ಸಮರ್ಪಣೆಯಾಗಿದೆ. ಸಮಾಜದ ಒಳಿತಿಗಾಗಿ ದಾನದ ಮೂಲಕ ದೊರೆತ ಈ ವಾಹನ ಬಳಕೆಯಾಗಲಿದೆ ಎಂದರು. ಹೆಚ್ಚಾಗಿ ಗ್ರಾಮೀಣ ಭಾಗಗಳಲ್ಲಿ ಹಾಗೂ ವನವಾಸಿ ಪ್ರದೇಶಗಳಲ್ಲಿ ಮತಾಂತರ ಸೇರಿದಂತೆ ಇತರ ಸಮಾಜದ್ರೋಹಿ ಕಾರ್ಯಗಳ ವಿರುದ್ಧ ಹೋರಾಡಲೂ, ಸೇವಾ ಭಾರತಿಯ ಈ ಆ್ಯಂಬುಲೆನ್ಸ್ ಸೇವೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಸೇವಾ ಭಾರತಿ ಮೂಲಕ ಸಂಘದ ಕೆಲಸವೂ ಆಗುತ್ತದೆ. ಸಮಾಜದಲ್ಲಿ ಎಲ್ಲರನ್ನು ಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಲು ಸೇವಾ ಭಾರತಿ ಪ್ರಯತ್ನಿಸುತ್ತಿದೆ ಎಂದು ಸೇವಾ ಭಾರತಿಯ ಜಿಲ್ಲಾಧ್ಯಕ್ಷ ಟಿ.ಸಿ ಚಂದ್ರನ್ ಅಭಿಪ್ರ‍್ರಾಯಿಸಿದರು. ತುರ್ತು ವಾಹನವನ್ನು ಕೇವಲ ರೋಗಿಗಳನ್ನು ಸಾಗಾಟ ಮಾಡುವುದು ಅಲ್ಲ. ವೈದ್ಯಕೀಯ ಸೇವೆ ನೀಡಲೂ ಬಳಕೆಯಾಗಲಿದೆ. ಗ್ರಾಮೀಣ ಭಾಗ ಹಾಗೂ ವನವಾಸಿ ಪ್ರದೇಶಗಳಲ್ಲಿ ಇದರ ಉಪಯೋಗ ಹೆಚ್ಚಾಗಿ ಆಗಬೇಕಿದೆ ಎಂದರು. ಆರ್.ಎಸ್.ಎಸ್ ಮಂಗಳೂರು ವಿಭಾಗದ ಸಂಘಚಾಲಕ ಗೋಪಾಲ್ ಚೆಟ್ಟಿಯಾರ್ ವೇದಿಕೆಯಲ್ಲಿದ್ದರು. ಸೇವಾ ಭಾರತಿಯ ಉಪಾಧ್ಯಕ್ಷ ಕೆ.ಕೆ ಮಹೇಶ್ ಕುಮಾರ್ ಸ್ವಾಗತಿಸಿದರು. ಚಂದ್ರ ಅವರು ನಿರೂಪಿಸಿದರು. ಕಾರ್ಯದರ್ಶಿ ತಿರುಮಲ್ಲೇಶ್ ವಂದಿಸಿದರು. ಮಾಂಡೊವಿ ಮೋರ‍್ಸ್ ಪ್ರತಿನಿಧಿಗಳು ಸೇವಾ ಭಾರತಿಗೆ ತುರ್ತು ವಾಹನದ ಕೀ ಹಸ್ತಾಂತರಿಸಿದರು.

ಈ ಸಂದರ್ಭ ಶಾಸಕ ಎಂ.ಪಿ ಅಪ್ಪಚ್ಚು ರಂಜನ್, ಆರ್.ಎಸ್.ಎಸ್. ಕೊಡಗು ವಿಭಾಗ ಪ್ರಚಾರಕ್ ಸುರೇಶ್, ಮೂಡಾ ಅಧ್ಯಕ್ಷ ರಮೇಶ್ ಹೊಳ್ಳಾ, ಬಿ.ಜೆ.ಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ವಕೀಲ ಕೃಷ್ಣಮೂರ್ತಿ, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಸದಸ್ಯರಾದ ಮಹೇಶ್ ಜೈನಿ, ಅಪ್ಪಣ್ಣ, ಉಮೇಶ್ ಸುಬ್ರಮಣಿ, ರಮೇಶ್, ಬಿ.ಜೆ.ಪಿ ಪ್ರಮುಖರಾದ ಮನು ಮಂಜುನಾಥ್, ಅರುಣ್ ಕುಮಾರ್ ಹಾಗೂ ಇತರರು ಹಾಜರಿದ್ದರು.