ಕಡಂಗ, ನ. ೨೪: ಧಾರ್ಮಿಕ ಹಾಗೂ ಸಾಮಾಜಿಕ ವಿಚಾರಗಳಲ್ಲಿ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಸಮಾಜದ ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಎಸ್‌ಎಸ್‌ಎಫ್ ರಾಜ್ಯ ಸಮಿತಿಯು ವಿವಿಧ ಘಟಕಗಳಲ್ಲಿ ಎರಡು ವರ್ಷಕ್ಕೊಮ್ಮೆ ಆಯೋಜಿಸುವ ಪ್ರತಿಭೋತ್ಸವದ ಕೊಡಗು ಜಿಲ್ಲಾ ಮಟ್ಟದ ಕಾರ್ಯಕ್ರಮ ಹುಂಡಿಯ ಮರ್ಕಝ್ ಪಬ್ಲಿಕ್ ಸ್ಕೂಲ್ ವಠಾರದಲ್ಲಿ ಸಮಾಪ್ತಿಗೊಂಡಿತು. ಕಾರ್ಯಕ್ರಮದಲ್ಲಿ ಹುಂಡಿ ಜಮಾತ್ ಅಧ್ಯಕ್ಷ ಸಿ.ಮುಹಮ್ಮದ್ ಹಾಜಿ ಧ್ವಜಾರೋಹಣ ನೆರವೇರಿಸಿದರು.

ಮರ್ಕಝ್ ಪಬ್ಲಿಕ್ ಸ್ಕೂಲ್ ವ್ಯವಸ್ಥಾಪಕ ಹಂಝ ಅನ್ವರಿ ಉದ್ಘಾಟನೆ ಮಾಡುವ ಮೂಲಕ ಜಿಲ್ಲಾ ಪ್ರತಿಭೋತ್ಸವಕ್ಕೆ ಅಧಿಕೃತ ಚಾಲನೆ ನೀಡಿದರು. ರಾಶಿದ್ ಬುಖಾರಿ ಹಾಗೂ ಇಲ್ಯಾಸ್ ಅಲ್ ಹೈದ್ರೂಸಿ ತಂಙ್ಞಳ್ ಎಮ್ಮೆಮಾಡು ಅವರ ನೇತೃತ್ವದಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಿತು, ಅಶ್ಕರ್ ಸಖಾಫಿ ಕೊಟ್ಟಮುಡಿ ಸ್ವಾಗತ ಕೋರಿದರು.

ಶಾಖೆ, ಸೆಕ್ಟರ್, ಡಿವಿಷನ್ ಮಟ್ಟಗಳಲ್ಲಿ ಆಯ್ಕೆಯಾದ ಸುಮಾರು ೨೫೦ ಪ್ರತಿಭೆಗಳಿಗೆ ೬೦ರಷ್ಟು ಸ್ಪರ್ಧಾ ಕಾರ್ಯಕ್ರಮಗಳು ನಡೆದವು. ಎಸ್‌ಎಸ್‌ಎಫ್ ಜಿಲ್ಲಾಧ್ಯಕ್ಷ ಶಾಫಿ ಸಅದಿ ಸೋಮವಾರಪೇಟೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪದಲ್ಲಿ ಜಂಇಯ್ಯತ್ತುಲ್ ಉಲಮಾ ಒಕ್ಕೂಟದ ಜಿಲ್ಲಾಧ್ಯಕ್ಷ ಸೈಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೂಸಿ ತಂಙ್ಞಳ್ ಎಮ್ಮೆಮಾಡು ಪ್ರಾರ್ಥನೆ ನಿರ್ವಹಿಸಿದರು. ಕೊಡಗು ಜಿಲ್ಲಾ ನಾಇಬ್ ಖಾಝಿ ಉದ್ಘಾಟಿಸಿದರು.

ಸಮಾಜ ಸೇವಕ ವಿ.ಪಿ ಶಶಿಧರ್, ಯುವ ಸಾಹಿತಿ ನೌಷಾದ್ ಜನ್ನತ್, ಮಾಧ್ಯಮ ವರದಿಗಾರ ರಂಜಿತ್ ಕವಲಪ್ಪಾರವರು ವಿಶೇಷ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ವೇದಿಕೆಯಲ್ಲಿ ಅಶ್ರಫ್ ಅಹ್ಸನಿ ಉಸ್ತಾದ್ ಹಫೀಳ್ ಸಅದಿ ಕೊಳಕೇರಿ, ಇಸ್ಮಾಯಿಲ್ ಸಖಾಫಿ ಕೊಂಡAಗೇರಿ, ಏಅಈನ ಜಲೀಲ್ ನಿಝಾಮಿ, ಏಒಎಯ ಮುಹಮ್ಮದ್ ಹಾಜಿ ಕುಂಜಿಲ, ಲತೀಫ್ ಸುಂಟಿಕೊಪ್ಪ, ವಕೀಲ ಕುಂಞÂ ಅಬ್ದುಲ್ಲಾ, ಹಮೀದ್ ಕಬಡಕೇರಿ, ನೌಷಾದ್ ಝುಹ್ರಿ, ಮಾಲ್ದಾರೆ ಗ್ರಾ.ಪಂ ಅಧ್ಯಕ್ಷರಾದ ಶಮೀರ್, ಏSWಂ ಮುಖಂಡ ಬಶೀರ್, ಮುಂತಾದ ಗಣ್ಯರು ಉಪಸ್ಥಿತರಿದ್ದರು. ಪ್ರತಿಭೋತ್ಸವದ ಚಾಂಪಿಯನ್ ಟ್ರೋಫಿಯನ್ನು ಮಡಿಕೇರಿ ಡಿವಿಷನ್ ತನ್ನದಾಗಿಸಿಕೊಂಡಿತು. ವೀರಾಜಪೇಟೆ ಹಾಗೂ ಸೋಮವಾರಪೇಟೆ ಕ್ರಮವಾಗಿ ದ್ವಿತೀಯ ತೃತೀಯ ಸ್ಥಾನಗಳಿಸಿತು. ರಾಜ್ಯ ಮಟ್ಟದ ಪ್ರತಿಭೋತ್ಸವ ಕಾರ್ಯಕ್ರಮವು ತಾ.೨೬, ೨೭, ೨೮ರಂದು ದ.ಕ. ಜಿಲ್ಲೆಯ ಕೃಷ್ಣಾಪುರದಲ್ಲಿ ನಡೆಯಲಿದೆ ಎಂದು ಜಿಲ್ಲಾ ಕಾರ್ಯದರ್ಶಿ ಮುಜೀಬ್ ಕೊಂಡAಗೇರಿ ತಿಳಿಸಿದ್ದಾರೆ. -ವರದಿ ನೌಫಲ್ ಕಡಂಗ