ಶ್ರೀಮಂಗಲ, ನ. ೨೪: ಅತಿವೃಷ್ಟಿ ಹಾಗೂ ಅಕಾಲಿಕ ಮಳೆಯಿಂದ ನಷ್ಟಗೊಂಡಿರುವ ಕಾಫಿ ಬೆಳೆ ವೀಕ್ಷಣೆಗೆ ಆಗಮಿಸಿದ ಕಾಫಿ ಮಂಡಳಿಯ ಕಾರ್ಯದರ್ಶಿ ಜಗದೀಶ್ ಅವರಿಗೆ ಕೊಡಗು ಬೆಳೆಗಾರರ ಒಕ್ಕೂಟದಿಂದ ಬೆಳೆಗಾರರಿಗೆ ತಕ್ಷಣದ ನೆರವು ನೀಡಲು ಕೈಗೊಳ್ಳಬೇಕು ಹಾಗೂ ಸರಕಾರಕ್ಕೆ ಶಿಫಾರಸ್ಸು ಮಾಡಲು ಮನವಿ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿ ಮಾತನಾಡಿದ ಜಗದೀಶ್, ೨೦೧೮ ರಲ್ಲಿ ಉಂಟಾದ ಅತಿವೃಷ್ಟಿ ಹಾಗೂ ಅಕಾಲಿಕ ಮಳೆಯಿಂದ ನಷ್ಟಗೊಂಡ ಬೆಳೆಗಳಿಗೆ ಪರಿಹಾರ ನೀಡಲು ರಚಿಸಿದ ಟಾಸ್ಕ್ ಫೋರ್ಸ್ನ ಶಿಫಾರಸ್ಸಿನಂತೆ ಈಗ ಇರುವ ಎನ್.ಡಿ. ಆರ್.ಎಫ್ ಪರಿಹಾರದ ಮೊತ್ತವನ್ನು ಹೆಕ್ಟೆರ್‌ಗೆ ರೂ. ೧೮ ಸಾವಿರದಿಂದ ೩೬ ಸಾವಿರ ಹಾಗೂ ಈಗ ಇರುವ ೨ ಹೆಕ್ಟೆರ್ ಮಿತಿಯನ್ನು ೫ ಹೆಕ್ಟೆರ್‌ಗೆ ಹೆಚ್ಚಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಪರಿಹಾರ ಮೊತ್ತ ಪರಿಷ್ಕರಣೆ ಕಾಫಿ ಬೆಳೆಗೆ ಮಾತ್ರ ಮಾಡಲು ಸಾಧ್ಯವಿಲ್ಲ; ಎಲ್ಲಾ ಬೆಳೆಗೂ ಅನ್ವಯವಾಗುವಂತೆ ಸಲ್ಲಿಕೆಯಾಗಿದೆ ಎಂದು ಹೇಳಿದರು.

ಕಾಫಿ ಬೆಳೆಗೆ ಪ್ರಾಕೃತಿಕ ವಿಕೋಪ ನಷ್ಟ ಪರಿಹಾರ ಹಲವಾರು ವರ್ಷಗಳಿಂದ ಪರಿಷ್ಕರಣೆಗೊಂಡಿ ರುವುದಿಲ.್ಲ ಎನ್.ಡಿ.ಆರ್.ಎಫ್. ಪ್ರಸ್ತುತ ಹೆಕ್ಟೆರ್ ಒಂದಕ್ಕೆ ರೂ. ೧೮ ಸಾವಿರ ಇದ್ದು ಇದನ್ನು ಕನಿಷ್ಟ ರೂ. ೫೦ ಸಾವಿರಕ್ಕೆ ಏರಿಸಬೇಕು. ಈಗ ಇರುವ ಎರಡು ಹೆಕ್ಟೆರ್‌ಗೆ ಮಿತಿಯನ್ನು ಕನಿಷ್ಟ ಐದು ಹೆಕ್ಟೆರ್‌ಗೆ ವಿಸ್ತರಿಸಬೇಕು. ಪೆಟ್ರೋಲಿಯಂ ಉದ್ಯಮದ ನಂತರ ಅತಿ ಹೆಚ್ಚು ವಿದೇಶಿ ವಿನಿಮಯಗಳಿ ಸುತ್ತಿರುವ ಕಾಫಿ ಬೆಳೆಗೆ ಯಾವುದೇ ವಿಮೆ ಇರುವುದಿಲ್ಲ. ನಿರಂತರ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗುತ್ತಿರುವ ಕಾಫಿ ಬೆಳೆಗೆ ಸೂಕ್ತ ವಿಮೆ ಸೌಲಭ್ಯ ಒದಗಿಸಬೇಕು. ಒಂದು ಜಿಲ್ಲೆ ಒಂದು ಬೆಳೆ ಕೇಂದ್ರ ಸರಕಾರದ ಯೋಜನೆ ಯಂತೆ ಕೊಡಗು ಜಿಲ್ಲೆಗೆ ಕಾಫಿಯನ್ನು ಘೋಷಣೆಮಾಡಿದ್ದು ಈ ಯೋಜನೆಯಡಿ ಜಿಲ್ಲೆಯ ಪ್ರತಿ ಕಾಫಿ ಬೆಳೆಗಾರರಿಗೆ ಅಭಿವೃದ್ಧಿಯೋಜನೆ ರೂಪಿಸಬೇಕು ಎಂಬದು ಸೇರಿದಂತೆ ಕೋವಿಡ್ - ೧೯ ಲಾಕ್‌ಡೌನ್‌ನಿಂದ ಉಂಟಾದ ನಷ್ಟಕ್ಕೆ ದೇಶದ ಎಲ್ಲಾ ಕಾರ್ಮಿಕರಿಗೆ, ಉದ್ಯಮಕ್ಕೆ, ಕೃಷಿರಂಗಕ್ಕೆ ಸರಕಾರ ಪರಿಹಾರವನ್ನು ನೀಡಿದ್ದು ಕಾಫಿ ಬೆಳೆಗಾರರು ಹಾಗೂ ಕಾರ್ಮಿಕರಿಗೆ ಯಾವುದೇ ಪರಿಹಾರ ದೊರೆತಿರುವುದಿಲ್ಲ. ಇದನ್ನು ಪರಿಗಣಿಸಿ ಸೂಕ್ತ ನೆರವು ಒದಗಿಸಬೇಕು ಎಂದು ಮನವಿಯಲ್ಲಿ ಗಮನ ಸೆಳೆಯಲಾಗಿದೆ.

ಕೊಡಗು ಬೆಳೆಗಾರರ ಒಕ್ಕೂmದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಖಜಾಂಚಿ ಮಾಣೀರ ವಿಜಯ್ ನಂಜಪ್ಪ, ಮಾಜಿ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ, ಕಾಫಿ ಮಂಡಳಿಯ ಸದಸ್ಯರಾದ ಮಚ್ಚಮಾಡ ಡಾಲಿ ಚಂಗಪ್ಪ, ಟಿ.ಟಿ. ಜಾನ್, ಹಿತ ರಕ್ಷಣಾ ಸಮಿತಿಯ ಚೊಟ್ಟೆಯಾಂಡಮಾಡ ವಿಶ್ವನಾಥ್ ಮತ್ತಿತರರು ಹಾಜರಿದ್ದರು.