*ಗೋಣಿಕೊಪ್ಪ, ನ. ೨೩: ರೂಪಾಯಿ ಹತ್ತು ಕೋಟಿ ವೆಚ್ಚದಲ್ಲಿ ದುರಸ್ತಿ ಕಂಡಿದ್ದ ಕೊಣನೂರು, ಮಾಕುಟ್ಟ ಹೆದ್ದಾರಿ ಸಂಪೂರ್ಣ ಹದಗೆಡುತ್ತಿದೆ.
ಬಿ.ಎಸ್.ಎನ್.ಎಲ್. ಇಲಾಖೆಯ ಕೇಬಲ್ ಅಳವಡಿಕೆಯ ಹಿನ್ನೆಲೆ ರಸ್ತೆಯ ಬದಿಗಳಲ್ಲಿ ತೆಗೆಯುತ್ತಿರುವ ಚರಂಡಿಗಳಿAದ ಮಾಕುಟ್ಟ, ಪೆರುಂಬಾಡಿ ರಸ್ತೆ ಸಂಪೂರ್ಣ ಹಾಳಾಗುತ್ತಿದ್ದು, ಹೆದ್ದಾರಿ ಸಂಪೂರ್ಣ ದುರಸ್ತಿಗೆ ಒಳಗಾಗುತ್ತಿದೆ. ಇದರಿಂದ ಆತಂಕ ಸೃಷ್ಟಿಯಾಗಿದೆ.
ರಸ್ತೆ ಬದಿಗಳಲ್ಲಿ ಅವೈಜ್ಞಾನಿಕವಾಗಿ ತೆಗೆಯುತ್ತಿರುವ ಚರಂಡಿಗಳಿAದ ಮಳೆ ಸಂದರ್ಭ ರಸ್ತೆ ಕುಸಿಯುವ ಹಂತಕ್ಕೆ ತಲುಪಿದೆ.
ಕಳೆದ ೨೦೧೮ ರಿಂದ ೨೦೨೦ ರವರೆಗೆ ರಸ್ತೆ ಸರಪಳಿಗಳಲ್ಲಿ ಕಿತ್ತು ಹೋದ ಡಾಂಬರೀಕರಣವನ್ನು ಮರು ಕಾಮಗಾರಿ ನಡೆಸಿ ರಸ್ತೆಗಳ ದುರಸ್ತಿ ಕಾರ್ಯ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಮರು ಡಾಂಬರೀಕರಣಕ್ಕೆ ಸುಮಾರು ರೂ. ೧೦ ಕೋಟಿ ವೆಚ್ಚವಾಗಿತ್ತು. ಈ ಬಾರಿಯೂ ಡಾಂಬರೀಕರಣಗೊAಡ ರಸ್ತೆಗಳನ್ನು ಜೆ.ಸಿ.ಬಿ. ಯಂತ್ರಗಳ ಮೂಲಕ ಬಿ.ಎಸ್.ಎನ್.ಎಲ್. ಇಲಾಖೆ ಅಗೆದು ಹೊಂಡಗಳನ್ನು ನಿರ್ಮಿಸಿದೆ.. ಇದರಿಂದ ರಸ್ತೆಗಳ ಬದಿ ಕುಸಿಯುವ ಆತಂಕ ಸೃಷ್ಟಿಯಾಗಿದೆ. ಕೋಟಿ ವೆಚ್ಚದಲ್ಲಿ ನಿರ್ಮಿಸಿದ ರಸ್ತೆ ಡಾಂಬರೀಕರಣ ಕಿತ್ತುಹೋಗುವುದರ ಜತೆಗೆ ರಸ್ತೆಗಳು ಕುಸಿಯುವ ಸ್ಥಿತಿ ಎದುರಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬಿ.ಎಸ್.ಎನ್.ಎಲ್. ಇಲಾಖೆಯ ವಿರುದ್ಧ ಲೋಕೋಪಯೋಗಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕೆAದು ಸ್ಥಳೀಯರು ಒತ್ತಾಯಿಸಿದ್ದಾರೆ.
- ಎನ್.ಎನ್. ದಿನೇಶ್