ವೀರಾಜಪೇಟೆ, ನ. ೨೩: ಇಲ್ಲಿಗೆ ಸಮಿಪದ ಅರಮೇರಿ ಗ್ರಾಮದಲ್ಲಿ ಇರುವ ಬೆಪ್ಪುನಾಡು (ಅರಮೇರಿ, ನಾಲ್ಕೇರಿ, ಬೆಳ್ಳುಮಾಡು, ಕಡಂಗ ಮುರೂರು, ಕದನೂರು, ಮೈತಾಡಿ, ಕೆದಮುಳ್ಳೂರು, ಕುಂಜಿಲಗೇರಿ, ಕೊಟ್ಟೋಳಿ, ಬೆಳ್ಳರಿಮಾಡು) ವಿನ ಮಾದಪಟ್ಟು ನಾಡ್‌ಮಂದ್‌ನಲ್ಲಿ ಸಂಪ್ರದಾಯದAತೆ ಪುತ್ತರಿ ಕೋಲ್ ನಡೆಯಿತು.

ಊರಿನವರು ಹಾಗೂ ಪರಿಶಿಷ್ಟ (ಕೆಂಬಟ್ಟಿ) ಜನಾಂಗದವರು ಕುಂದನು-ಚೂಳೆ, ಕಾಪಳ, ಮಾಪಳೆ, ಸಿದ್ದಿ, ವಡ್ಡ, ಪಟ್ಟ ವೇಷದರಿಸಿ ಸಮಿಪದ ಎಟ್ಟ್ಮಾನಿ ಮಂದ್‌ನಲ್ಲಿ ಸೇರಿ ದುಡಿಕೊಟ್ಟ್ ಪಾಟ್, ಓಡ್ಡೋಲಗದೊಂದಿಗೆ ಊರಿನ ತಕ್ಕ ಮುಖ್ಯಸ್ಥರೊಂದಿಗೆ ಮಾದಪಟ್ಟ್ ಮಂದ್‌ನಲ್ಲಿ ಮೇದಪರೆಯ ತಾಳಕ್ಕೆ ಹೆಜ್ಜೆ ಹಾಕಿ ಕೋಲ್ ಹೊಡೆದು ಸಂಭ್ರ‍್ರಮಿಸಿದರು.