ಮಡಿಕೇರಿ, ನ. ೨೩: ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ಧಾರವಾಡ ಮತ್ತು ಬೆಂಗಳೂರು ಇವರ ವೇದಿಕೆಯಡಿ ೬೬ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಅಂತರ್ಜಾಲ ಆಧಾರಿತ ಸ್ಪರ್ಧೆಯಲ್ಲಿ ಬೆಟ್ಟಗೇರಿಯ ಕಡ್ಲೇರ ಎಂ. ರುಷಿಕಾ ‘ಕನ್ನಡ ಕುಲತಿಲಕ’ ರಾಜ್ಯಮಟ್ಟದ ಪ್ರಶಸ್ತಿ ಪಡೆದುಕೊಂಡಿದ್ದಾಳೆ.