*ಸಿದ್ದಾಪುರ, ನ. ೨೩: ಅಭ್ಯತ್‌ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆ ತಾ. ೨೭ ರಂದು ನಡೆಯಲಿದೆ. ಅಧಿಕಾರ ಹಂಚಿಕೆಯ ಹಿನ್ನೆಲೆ ಮೊದಲ ಅರ್ಧ ಅವಧಿ ಅಧ್ಯಕ್ಷರಾಗಿದ್ದ ಪಾಲಚಂಡ ಅಚ್ಚಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ನಡೆಯುತ್ತಿದೆ. ಉಳಿದ ಅವಧಿಯ ಅಧ್ಯಕ್ಷ ಸ್ಥಾನ ಒಪ್ಪಂದದAತೆ ಕೆದಂಬಾಡಿ ಪ್ರಸನ್ನ ಅವರಿಗೆ ಹಂಚಿಕೆಯಾಗಲಿದೆ.