ಮುಳ್ಳೂರು, ನ. ೨೩: ಶ್ರೀ ಬೀರಲಿಂಗೇಶ್ವರ ಪ್ರಬಲಭೈರವಿ ಹಾಗೂ ಪರಿವಾರ ದೇವರುಗಳ ೩ನೇ ವರ್ಷದ ಪೂಜಾ ಮಹೋತ್ಸವ ಕಾರ್ಯಕ್ರಮ ಸೋಮವಾರ ಭಾವೈಕ್ಯತೆಯೊಂದಿಗೆ ನಡೆಯಿತು. ದೇವರ ಸೇವಾ ಸಮಿತಿ ವತಿಯಿಂದ ನಡೆದ ೩ನೇ ವರ್ಷದ ಪೂಜಾ ಮಹೋತ್ಸವವು ಪಟ್ಟಣದಲ್ಲಿರುವ ಹಿಂದೂ ಹಾಗೂ ಮುಸ್ಲಿಂ ಹಾಗೂ ಇತರ ಜಾತಿ ಜನಾಂಗ ಎಂಬ ಬೇಧಭಾವ ಇಲ್ಲದೆ ಎಲ್ಲಾ ಸಮುದಾಯಗಳ ಸಹಕಾರದೊಂದಿಗೆ ನಡೆಯುತ್ತದೆ. ಸೋಮವಾರ ನಡೆದ ಪೂಜಾ ಮಹೋತ್ಸದಲ್ಲಿ ಪಟ್ಟಣ ಸೇರಿ ದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿರುವ ದೇವಸ್ಥಾನಗಳಲ್ಲಿ ಪೂಜಾ ಕಾರ್ಯ ಹಾಗೂ ಪಟ್ಟಣದಲ್ಲಿರುವ ಮಸೀದಿಯಲ್ಲಿ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಸಹಕಾರ ಬ್ಯಾಂಕ್ ಹತ್ತಿರದಲ್ಲಿ ನಡೆದ ಗಂಗೆ ಪೂಜೆ, ಗೋಪೂಜೆ ಮಂಗಳಾರತಿ ಪೂಜಾ ಕಾರ್ಯ ದೊಂದಿಗೆ ವಾರ್ಷಿಕ ಪೂಜಾ ಮಹೋತ್ಸವ ಪ್ರಾರಂಭಗೊAಡ ಬಳಿಕ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ವರೆಗೆ ಮಹಿಳೆಯರು ಕಳಸ ಕುಂಭ ಮೆರವಣಿಗೆಯಲ್ಲಿ ಸಾಗಿ ಬಂದರು. ಮಧ್ಯಪೇಟೆಯಲ್ಲಿರುವ ಶ್ರೀ ಗಣಪತಿ ಪಾರ್ವತಿ ಚಂದ್ರಮೌಳೇಶ್ವರ ದೇವ ಸ್ಥಾನದಲ್ಲಿ ದೇವರಿಗೆ ಮಹಾಸಂಕಲ್ಪ ಮುಂತಾದ ವಿಶೇಷ ಪೂಜಾ ವಿಧಿ ವಿಧಾನ ನೆರವೇರಿಸಲಾಯಿತು. ಪಟ್ಟಣದ ಊರು ಒಡೆಯ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಮಹಾಪೂಜೆ, ಮಂಗಳಾರತಿ ಕಾರ್ಯವನ್ನು ನೆರವೇರಿಸಲಾಯಿತು.
ಬಿದರೂರು ಗ್ರಾಮದಲ್ಲಿರುವ ಬ್ರಹ್ಮದೇವರ ಗುಡಿಯಲ್ಲಿ ಬ್ರಹ್ಮದೇವರಿಗೆ ಮಹಾಪೂಜೆ, ಮಂಗಳಾರತಿ ನೆರವೇರಿಸಲಾಯಿತು. ಬಿದರೂರು ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಮಹಾಪೂಜೆ, ಮಹಾಮಂಗಳಾರತಿ ಪೂಜಾ ವಿದಿವಿಧಾನ ನೆರವೇರಿಸಿದರು. ಹೆಮ್ಮನೆ ಗ್ರಾಮದಲ್ಲಿರುವ ಮಾರಮ್ಮ ಗುಡಿ ಮತ್ತು ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ವಿಶೇ಼ಷ ಮಹಾಪೂಜೆ, ಮಹಾಮಂಗಳಾರತಿ ಕಾರ್ಯ ನೆರವೇರಿಸಲಾಯಿತು. ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ದೇವತೆಗೆ ವಿಶೇಷ ಮಹಾಪೂಜೆ, ಮಹಾ ಮಂಗಳಾರತಿ ಪೂಜಾ ವಿದಿವಿಧಾನ ಕಾರ್ಯ ನೆರವೇರಿತು. ತ್ಯಾಗರಾಜ ಕಾಲೋನಿಯಲ್ಲಿರುವ ಶ್ರೀ ವಿಜಯ ವಿನಾಯಕ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಮಹಾಪೂಜೆ, ಮಹಾ ಮಂಗಳಾರತಿ ಪೂಜಾ ಕಾರ್ಯ ಮಾಡಲಾಯಿತು.
ಪಟ್ಟಣದ ಕೆಆರ್‌ಸಿ ವೃತ್ತದಲ್ಲಿರುವ ಬನ್ನಿಮಂಟಪದಲ್ಲಿ ವಿಶೇಷ ಮಹಾಪೂಜೆ, ಮಹಾಮಂಗಳಾರತಿ ಕಾರ್ಯ ನೆರವೇರಿಸಲಾಯಿತು. ಪಟ್ಟಣ ದಲ್ಲಿರುವ ಶ್ರೀ ರಾಮಮಂದಿರದಲ್ಲಿರುವ ಶ್ರೀರಾಮಚಂದ್ರ, ಶ್ರೀ ಸೀತಾಮಾತೆ, ಶ್ರೀ ಲಕ್ಷö್ಮಣ, ಶ್ರೀ ಆಂಜನೇಯಸ್ವಾಮಿ ಮೂರ್ತಿಗಳನ್ನು ಹೂವಿನಿಂದ ಅಲಂಕರಿಸಿ ದೇವರುಗಳಿಗೆ ವಿಶೇಷ ಮಹಾಪೂಜೆ, ಮಹಾಮಂಗಳಾರತಿ ಮುಂತಾದ ಪೂಜಾ ವಿದಿವಿಧಾನ ನೆರವೇರಿಸಲಾಯಿತು.
ಮಸೀದಿಯಲ್ಲಿ ಪ್ರಾರ್ಥನೆ
ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಜಾಮಿಯಾ ಮಸೀದಿಯಲ್ಲಿ ಮುಸ್ಲಿಂ, ಹಿಂದೂ ಸಮುದಾಯದ ಎಲ್ಲರೂ ಸೇರಿಕೊಂಡು ಸಾಮೂಹಿಕ ವಿಶೇಷ ಪ್ರಾರ್ಥನೆ ಮಾಡಲಾಯಿತು. ಶ್ರೀ ಬೀರಲಿಂಗೇಶ್ವರ ಪ್ರಬಲ ಭೈರವಿ ದೇವಸ್ಥಾನದಲ್ಲಿ ದೇವರುಗಳಿಗೆ ವಿಶೇಷ ಸಾಮೂಹಿಕ ಮಹಾಪೂಜೆ, ಮಹಾಮಂಗಳಾರತಿ ಪೂಜಾ ಕಾರ್ಯ ನೆರವೇರಿಸಿದ ಬಳಿಕ ಪ್ರಸಾದ ವಿನಿಯೋಗ ಮಾಡಲಾಯಿತು. ದೇವಸ್ಥಾನಗಳಲ್ಲಿ ನಡೆದ ವಿಶೇಷ ಪೂಜಾ ಕಾರ್ಯದಲ್ಲಿ ಹಿಂದೂ ಬಾಂಧವರೊAದಿಗೆ ಮುಸ್ಲಿಂ ಬಾಂಧವರು ಪಾಲ್ಗೊಂಡು ಭಾವೈಕ್ಯತೆ ಸಾರಿದರು. ದೇವರುಗಳ ಪೂಜಾ ಮಹೋತ್ಸವದ ಪ್ರಯುಕ್ತ ಸಾಮೂಹಿಕ ಅನ್ನದಾನ ಕಾರ್ಯ ನೆರವೇರಿತು. ಸಂಜೆ ಶ್ರೀ ಬೀರಲಿಂಗೇಶ್ವರ ಪ್ರಬಲ ಬೈರವೇಶ್ವರಿ ದೇವಿ ಸನ್ನಿಧಿಯಲ್ಲಿ ದೇವತೆಗೆ ವಿವಿಧ ಪೂಜೆ, ಹೋಮ ಹವನ ಮುಂತಾದ ಪೂಜಾ ವಿದಿವಿಧಾನ ಕಾರ್ಯ ಮುಂದುವರೆಯಿತು.
ಪೂಜಾ ಮಹೋತ್ಸವ ಕಾರ್ಯದಲ್ಲಿ ದೇವರ ಸಮಿತಿ ಪ್ರಮುಖರು ಸೇರಿದಂತೆ ವಿವಿಧ ದೇವಸ್ಥಾನ ಸಮಿತಿಯ ಪ್ರಮುಖರು, ಮಸೀದಿ ಸಮಿತಿಯ ಪ್ರಮುಖರು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.
- ಭಾಸ್ಕರ್ ಮುಳ್ಳೂರು, ಕೆ.ಎನ್. ದಿನೇಶ್