ಮಡಿಕೇರಿ, ನ. ೨೩: ನಗರದ ನೃತ್ಯ ಶಾಲೆ ವಿಂಗ್ಸ್ ಆಫ್ ಪ್ಯಾಶನ್‌ಗೆ ಬೆಸ್ಟ್ ಇನ್‌ಸ್ಟಿಟ್ಯೂಷನ್ ಪ್ರಶಸ್ತಿ ಲಭಿಸಿದೆ.

ಜಟಾಯು ಸ್ಟಾಫಿಂಗ್ ಫೋರ್ಸ್ ಪ್ರೆöÊವೇಟ್ ಲಿಮಿಟೆಡ್ ವತಿಯಿಂದ ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಂಗ್ಸ್ ಆಫ್ ಪ್ಯಾಶನ್‌ನ ಸ್ಥಾಪಕಿ ಹಾಗೂ ನೃತ್ಯ ತರಬೇತುದಾರರಾದ ಪ್ರೀತಾಕೃಷ್ಣ ಅವರು “ಇಂಡಿಯನ್ ಎಕ್ಸಲೆನ್ಸ್ ಬೆಸ್ಟ್ ಫ್ಯಾಕಲ್ಟಿ” ಅವಾರ್ಡ್ ಪಡೆದುಕೊಂಡರು. ಇದೇ ನೃತ್ಯ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರತಿಭಾವಂತ ಪ್ರಶಸ್ತಿ ಪಡೆದರು.