ಚೆಯ್ಯಂಡಾಣೆ, ನ. ೨೩: ಸುನ್ನಿ ಯುವಜನ ಸಂಘ ಕೊಡಗು ಜಿಲ್ಲಾ ವಾರ್ಷಿಕ ಮಹಾ ಸಭೆಯು ಕೊಳ ಕೇರಿಯ ಮದರಸ ಸಭಾಂಗಣದಲ್ಲಿ ಎಸ್‌ವೈಎಸ್ ಜಿಲ್ಲಾಧ್ಯಕ್ಷ ಅಬ್ದುಲ್ಲ ಸಖಾಫಿ ಉಸ್ತಾದ್ ಕೊಳಕೇರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಧ್ವಜಾರೋಹಣವನ್ನು ಕೊಳಕೇರಿ ಜಮಾಅತ್ ಉಪಾಧ್ಯಕ್ಷ ಸುಲೈಮಾನ್ ನೆರವೇರಿಸಿದರು. ದುಆ ನೇತೃತ್ವವನ್ನು ಉಪಾಧ್ಯಕ್ಷ ಸಯ್ಯದ್ ಇಲ್ಯಾಸ್ ಅಲ್ ಹೈದ್ರೂಸಿ ಎಮ್ಮೆ ಮಾಡು ವಹಿಸಿದ್ದರು. ಉದ್ಘಾಟನೆ ಯನ್ನು ಎಸ್‌ವೈಎಸ್ ರಾಜ್ಯಾಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ ನೆರವೇರಿಸಿದರು. ಎಸ್‌ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಪ್ರಾಸ್ತಾವಿಕ ಭಾಷಣ ಮಾಡಿ ಸಂಘಟನೆಯು ನಡೆದು ಬಂದ ಹಾದಿ ಹಾಗೂ ಸಂಘಟನೆಯ ಗುರಿ ಧ್ಯೇಯೋ ದ್ದೇಶದ ಬಗ್ಗೆ ಮಾಹಿತಿ ನೀಡಿದರು. ಬಳಿಕ ೨೦೨೧-೨೩ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಅಧ್ಯಕ್ಷರಾಗಿ ಸೈಯ್ಯದ್ ಇಲ್ಯಾಸ್ ಕಾಮಿಲ್ ಸಖಾಫಿ, ಎಮ್ಮೆಮಾಡು, ಉಪಾಧ್ಯಕ್ಷರಾಗಿ ಅಬ್ದುಲ್ಲಾ ಸಖಾಫಿ ಕೊಳಕೇರಿ, ಪ್ರಧಾನ ಕಾರ್ಯದರ್ಶಿ ಯಾಗಿ ಮೊÊದೀನ್ ಪೊನ್ನತ್ ಮೊಟ್ಟೆ, ಕೋಶಾಧಿಕಾರಿ ಯಾಗಿ ಅಬ್ದುಲ್ಲಾ ನೆಲ್ಲಿಹುದಿಕೇರಿ, ಇಸಾಬಾ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಮುಸ್ಲಿಯಾರ್ ಮಾಲ್ದಾರೆ, ದಅವಾ ಕಾರ್ಯದರ್ಶಿ ಯಾಗಿ ಆಲಿ ಸಅದಿ ಹುಂಡಿ, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಕೊಳಕೇರಿ, ಮಾಧ್ಯಮ ಕಾರ್ಯದರ್ಶಿ ಯಾಗಿ ಅಬ್ದುಲ್ ಸಲಾಂ ಕೆ.ಪಿ. ಗೋಣಿಕೊಪ್ಪ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಸಖಾಫಿ ಕೊಂಡAಗೇರಿ, ಸಾಮಾಜಿಕ ತಾಣ ಕಾರ್ಯದರ್ಶಿಯಾಗಿ ಸಿ.ಎಂ. ಹಂಝ ನೆಲ್ಲಿಹುದಿಕೇರಿ ಹಾಗೂ ೧೯ ಜನರನ್ನು ಕಾರ್ಯಕಾರಿಣಿ ಸದಸ್ಯ ರನ್ನಾಗಿ ಆಯ್ಕೆ ಮಾಡಲಾಯಿತು.

ಜಿಲ್ಲೆಯ ನೂತನ ಸಹಾಯಕ ಖಾಝಿಗಳಾಗಿ ಆಯ್ಕೆಯಾದ ಕೂರ್ಗ್ ಜಂಇಯತುಲ್ ಉಲ ಮಾದ ಉಪಾಧ್ಯಕ್ಷ ಶಾದುಲಿ ಫೈಝಿ ಉಸ್ತಾದ್‌ರನ್ನು ಮಹಾಸಭೆಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ಎಸ್‌ವೈಎಸ್ ರಾಜ್ಯ ಕೋಶಾಧಿಕಾರಿ ಅಬ್ದುಲ್ ಹಕೀಮ್ ಕೊಡ್ಲಿಪೇಟೆ, ಎಸ್‌ವೈಎಸ್ ರಾಜ್ಯ ಮಾಧ್ಯಮ ಕಾರ್ಯದರ್ಶಿ ಅಬ್ದುಲ್ ಹಫೀಲ್ ಸಅದಿ ಕೊಳಕೇರಿ, ರಾಜ್ಯ ಎಸ್‌ಎಸ್ ಎಫ್ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡAಗೇರಿ, ನಿರ್ಗಮಿತ ಕೋಶಾಧಿಕಾರಿ ಇಬ್ರಾಹಿಂ ಕಲ್ಲುಬಾಣೆ ಉಪಸ್ಥಿತರಿದ್ದರು.