ಸೋಮವಾರಪೇಟೆ, ನ. ೨೩: ಇಲ್ಲಿನ ಜೈಜವಾನ್ ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಬಿ.ಆರ್. ಈರಪ್ಪ ಅವರ ಅಧ್ಯಕ್ಷತೆಯಲ್ಲಿ ಪತ್ರಿಕಾ ಭವನದಲ್ಲಿ ನಡೆಯಿತು.

ಸಂಘದ ಕಟ್ಟಡ ನಿರ್ಮಾಣದ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಸಭೆಯಲ್ಲಿ ಹಿಂದಿನ ಸಾಲಿನ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನೇ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಚೌಡ್ಲು ಗ್ರಾಮದ ಎಸ್.ಎಂ. ಸುಬ್ರಮಣಿ ಆಯ್ಕೆಯಾದರು. ಕರ್ಕಳ್ಳಿ ಆರ್.ಜಿ. ಬಸಪ್ಪ (ಕಾರ್ಯದರ್ಶಿ), ಚೌಡ್ಲು ಗ್ರಾಮದ ಎಂ.ಕೆ. ಸುಕುಮಾರ್ (ಖಜಾಂಚಿ), ಅಭಿಮಠ ಗ್ರಾಮದ ಎ.ಕೆ. ಮಾಚಯ್ಯ (ಲೆಕ್ಕ ಪರಿಶೋಧಕರು) ಹಾಗೂ ಆಡಳಿತ ಮಂಡಳಿ ಸದಸ್ಯರಾಗಿ ಅಬ್ಬೂರುಕಟ್ಟೆ ಎನ್.ಕೆ. ಲಿಂಗಪ್ಪ, ಹಾನಗಲ್ಲು ಹೆಚ್.ಆರ್. ನವೀನ್, ಕಿಬ್ಬೆಟ್ಟ ಕೆ.ಜಿ. ಶೇಷಾದ್ರಿ, ಮಾಟ್ನಳ್ಳಿ ಎಂ.ಈ. ಮಹೇಶ್, ಚೌಡ್ಲು ಎಂ.ಪಿ. ಪೂವಯ್ಯ, ಕಿಬ್ಬೆಟ್ಟ ಎನ್.ಜಿ. ಕೆಂಪಯ್ಯ, ಕರ್ಕಳ್ಳಿ ಶಶಿಕಲಾ ಆಯ್ಕೆಯಾದರು.