ಸಿದ್ದಾಪುರ, ನ. ೨೧: ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಸಿದ್ದಾಪುರ- ಮಧುರೈ ಅಂತಾರಾಜ್ಯ ಬಸ್ ಸಂಚಾರ ಇದೀಗ ಮತ್ತೆ ಪುನಾರಂಭಗೊAಡಿದೆ.
ಕಳೆದ ಹಲವು ವರ್ಷಗಳಿಂದ ಅಂತಾರಾಜ್ಯ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್ ಪ್ರಾರಂಭಿಸಲಾಗಿತ್ತು.
ಸಿದ್ದಾಪುರ ಪಾಲಿಬೆಟ್ಟ ಸುತ್ತಮುತ್ತಲಿನ ಗ್ರಾಮಗಳಲ್ಲಿರುವವರು ತಮಿಳುನಾಡಿಗೆ ತೆರಳಲು ಏಕೈಕ ಬಸ್ ಇದಾಗಿದ್ದು
ಬಸ್ಸು ಪುನರಾರಂಭದಿAದ ಪ್ರಯಾಣಿಕರಿಗೆ ಹೆಚ್ಚು ಅನುಕೂಲ ವಾಗಲಿದೆ ಎಂದು ಕಾವೇರಿ ತಮಿಳು ಸಂಘದ ಜಿಲ್ಲಾಧ್ಯಕ್ಷ ತಿರುಮಲ ರಾಜ ಪತ್ರಿಕೆಗೆ ತಿಳಿಸಿದ್ದಾರೆ. ತಮಿಳುನಾಡು ಮಧುರೈ ಬಸ್ ಪುನರಾರಂಭಗೊAಡು ಸಿದ್ದಾಪುರಕ್ಕೆ ಆಗಮಿಸಿದ ಸಂದರ್ಭ ಕಾವೇರಿ ತಮಿಳು ಸಂಘದ ನೇತೃತ್ವದಲ್ಲಿ ಸ್ವಾಗತಿಸಲಾಯಿತು. ಬಸ್ಗೆ ವಿಶೇಷÀ ಪೂಜೆ ನೆರವೇರಿಸಿ ಅಲಂಕಾರ ಮಾಡಿ ಪ್ರಯಾಣಿಕರಿಗೆ ಶುಭ ಕೋರಿದರು.
ಈ ಸಂದರ್ಭ ಕಾವೇರಿ ತಮಿಳು ಸಂಘದ ಉಪಾಧ್ಯಕ್ಷ ಮೈಕಲ್ ಪಾಲಿಬೆಟ್ಟ, ಕಣ್ಣನ್ ಪ್ರಮುಖರಾದ ಕುಮಾರ್, ಅಳಗು, ಮುರುಗೇಶ್, ಸಬರಿ, ಮೋಹನ್ ರಾಜ್, ಮುತ್ತುವೇಲ್, ತಂಬಿ, ಮಣಿ, ಸರವಣ ,ಪೊಲೀಸ್ ಮುಖ್ಯ ಪೇದೆ ಬೆಳ್ಳಿಯಪ್ಪ ಸೇರಿದಂತೆ ಸ್ಥಳೀಯರು ಹಾಜರಿದ್ದರು.