ಚೆಟ್ಟಳ್ಳಿ, ನ. ೨೧: ಪುತ್ತರಿ ಹಬ್ಬದ ದಿನ ರಾತ್ರಿ ಪುತ್ತರಿರ ಪಪ್ಪು ತಿಮ್ಮಯ್ಯ ಅವರ ಮನೆಗೆ ತೆರಳಿ ಪೊಲೀಸ್ ಪೇದೆಯೊಬ್ಬರು ಹಬ್ಬಾಚರಣೆಗೆ ಅಡ್ಡಿಪಡಿಸಿದ ಹಿನ್ನೆಲೆ ಸ್ಥಳೀಯರು ಹಾಗೂ ಸಂಘ ಸಂಸ್ಥೆಯ ಪ್ರಮುಖರು ಚೆಟ್ಟಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ ಪೊಲೀಸ್ ಪೇದೆಯ ಮೇಲೆ ಕ್ರಮಕೈಗೊಳ್ಳಲು ಒತ್ತಾಯಿಸಿದ ಘಟನೆ ನಡೆಯಿತು.

ನಿನ್ನೆ ರಾತ್ರಿ ಪುತ್ತರಿಹಬ್ಬವನ್ನು ಚೆಟ್ಟಳ್ಳಿಯ ಪುತ್ತರಿರ ಐನ್ ಮನೆಯಲ್ಲಿ ಆಚರಿಸಿ ರಾತ್ರಿ ಕುಟುಂಬ ಸಮೇತರಾಗಿ ಪಪ್ಪುತಿಮ್ಮಯ್ಯ ಮನೆಗೆ ತೆರಳಿ ಮನೆಯ ಅಂಗಳದಲ್ಲಿ ಪಟಾಕಿ ಚೆಟ್ಟಳ್ಳಿ, ನ. ೨೧: ಪುತ್ತರಿ ಹಬ್ಬದ ದಿನ ರಾತ್ರಿ ಪುತ್ತರಿರ ಪಪ್ಪು ತಿಮ್ಮಯ್ಯ ಅವರ ಮನೆಗೆ ತೆರಳಿ ಪೊಲೀಸ್ ಪೇದೆಯೊಬ್ಬರು ಹಬ್ಬಾಚರಣೆಗೆ ಅಡ್ಡಿಪಡಿಸಿದ ಹಿನ್ನೆಲೆ ಸ್ಥಳೀಯರು ಹಾಗೂ ಸಂಘ ಸಂಸ್ಥೆಯ ಪ್ರಮುಖರು ಚೆಟ್ಟಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ ಪೊಲೀಸ್ ಪೇದೆಯ ಮೇಲೆ ಕ್ರಮಕೈಗೊಳ್ಳಲು ಒತ್ತಾಯಿಸಿದ ಘಟನೆ ನಡೆಯಿತು.

ನಿನ್ನೆ ರಾತ್ರಿ ಪುತ್ತರಿಹಬ್ಬವನ್ನು ಚೆಟ್ಟಳ್ಳಿಯ ಪುತ್ತರಿರ ಐನ್ ಮನೆಯಲ್ಲಿ ಆಚರಿಸಿ ರಾತ್ರಿ ಕುಟುಂಬ ಸಮೇತರಾಗಿ ಪಪ್ಪುತಿಮ್ಮಯ್ಯ ಮನೆಗೆ ತೆರಳಿ ಮನೆಯ ಅಂಗಳದಲ್ಲಿ ಪಟಾಕಿ ಸಾಮಾಜಿಕ ಕಾರ್ಯಕರ್ತ ಮಾದೇಟಿರ ಪಿ.ತಿಮ್ಮಯ್ಯ ಪೊಲೀಸ್ ಪೇದೆಯ ವಿರುದ್ದ ತಕ್ಷಣವೇ ಕ್ರಮಕೈಗೊಳ್ಳಬೇಕೆಂದು ಚೆಟ್ಟಳ್ಳಿ ಠಾಣಾ ಎಎಸ್‌ಐ ಶ್ರೀನಿವಾಸ್ ಅÀವರನ್ನು ಒತ್ತಾಯಿಸಿದರು. ಈ ವೇಳೆ ಮಡಿಕೇರಿ ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ರವಿಕಿರಣ್ ಚೆಟ್ಟಳ್ಳಿ ಪೊಲೀಸ್ ಠಾಣೆಗೆ ಆಗಮಿಸಿ ದೂರನ್ನು ಪಡೆದು ಪೊಲೀಸ್ ಪೇದೆಯ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ಈ ಸಂದರ್ಭ ಕ್ಯಾಪ್ಟನ್ ಮುಳ್ಳಂಡ ತಿಮ್ಮಯ್ಯ, ಪುತ್ತರಿರ ರಾಬಿನ್ ಚಂಗಪ್ಪ, ಬಟ್ಟೀರ ಕಾಳಪ್ಪ, ಚೆಟ್ಟಳ್ಳಿ ಕೊಡವ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತುಚಂಗಪ್ಪ, ಮಾಹಿತಿ ಹಕ್ಕು ಕಾರ್ಯಕರ್ತ ಪುತ್ತರೀರ ದೇವಯ್ಯ, ವಕೀಲ ನೆಲ್ಲಮಕ್ಕಡ ಮಾದಯ್ಯ, ಚೆಟ್ಪಳ್ಳಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ತೀರ್ಥಕುಮಾರ್, ಮುಳ್ಳಂಡ ಅಂಜನ್ ಮುತ್ತಪ್ಪ, ಕೊಳಂಬೆ ವಿನುಕುಮಾರ್, ಪೇರಿಯನ ಘನಶ್ಯಾಂ, ಕೆಚ್ಚೇಟ್ಟಿರ ಡಿಕ್ಕಿ ಅಪ್ಪಯ್ಯ, ಪತ್ರಕರ್ತ ಪುತ್ತರಿರ ಕರುಣ್ ಕಾಳಯ್ಯ ಪ್ರಮುಖರು ಹಾಗೂ ಸಾರ್ವಜನಿಕರು ಹಾಜರಿದ್ದರು.