ಗೋಣಿಕೊಪ್ಪ ವರದಿ, ನ. ೨೧ : ಅವಹೇಳನಕಾರಿ ಹೇಳಿಕೆ ನೀಡಿರುವ ಸಂಗೀತ ನಿರ್ದೇಶಕ ಹಂಸಲೇಖ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ದಿ ಸಂಘ ಅಧ್ಯಕ್ಷ ಬಾರಿತ್ತಾಯ ರಾಧಾಕೃಷ್ಣ ಒತ್ತಾಯಿಸಿದ್ದಾರೆ. ಕಾಟಾಚಾರಕ್ಕೆ ಕ್ಷಮೆ ಕೇಳಿದ್ದಾರೆ. ಬೆಂಗಳೂರು ಶ್ರೀಗಳ ಮಠದಲ್ಲಿರುವ ಸಮಾಧಿ ಎದುರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸುತ್ತಿದೇವೆ. ತಪ್ಪಿದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಕಾರ್ಯದರ್ಶಿ ಶಿವಪ್ರಸಾದ್ ಕೇಕುಣ್ಣಾಯ ಮಾತನಾಡಿ, ಸಭಾಂಗಣ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಖಜಾಂಜಿ ಪವನ್ ಕಂಡಿಪಾಡಿತ್ತಾಯ, ನಿರ್ದೇಶಕ ಸುದರ್ಶನ್ ಬಾರಿತ್ತಾಯ, ಮೋಹನ್ ನಲ್ಲೂರಾಯ ಇದ್ದರು.