ಮಡಿಕೇರಿ, ನ. ೧೯: ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಜಿಲ್ಲಾ ಕೇಂದ್ರವೂ ಆಗಿರುವ ಮಡಿಕೇರಿಯಿಂದ ವೀರಾಜಪೇಟೆ ಮಾರ್ಗದ ರಸ್ತೆ ತೀರಾ ದುಸ್ಥಿತಿ ಯಲ್ಲಿದ್ದು, ಈ ರಸ್ತೆಯಲ್ಲಿನ ಸಂಚಾರಕ್ಕೆ ಭಾರೀ ತೊಂದರೆ ಎದುರಾಗಿದೆ. ರಸ್ತೆಯ ಅಲ್ಲಲ್ಲಿ ಭಾರೀ ಗುಂಡಿ ಬಿದ್ದಿದ್ದು, ಹಲವೆಡೆ ರಸ್ತೆಯ ಡಾಂಬರೀಕರಣವೂ ಕಿತ್ತು ಹೋಗಿದ್ದು, ದಿನಂಪ್ರತಿ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ವಾಹನಗಳು ಪ್ರಯಾಸದಲ್ಲಿ ತೆರಳುವಂತಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯೂ ಕೂಡ ರಸ್ತೆ ಹಾಳಾಗಲು ಒಂದು ಕಾರಣವಾಗಿದೆ.

ಸದ್ಯದ ಮಟ್ಟಿಗೆ ತಾತ್ಕಾಲಿಕವಾಗಿ ರಸ್ತೆಯ ಗುಂಡಿಗಳನ್ನು ಮುಚ್ಚಲು ಲೋಕೋಪಯೋಗಿ ಇಲಾಖೆ ಸನ್ನದ್ಧ ವಿದ್ದರೂ ನಿರಂತರ ಮಳೆಯಿಂದಾಗಿ ಇದಕ್ಕೆ ಅಡಚಣೆಯಾಗುತ್ತಿದೆ. ಈಗಿನ ಪರಿಸ್ಥಿತಿಯಲ್ಲಿ ಗುಂಡಿಮುಚ್ಚಿದರೂ ಮತ್ತೆ ಹಾಳಾಗುವ ಸಂಭವವಿರು ವದರಿಂದ ವಿಳಂಬವಾಗುತ್ತಿದೆ. ಕಳೆದ ಹಲವು ಸಮಯಗಳ ಹಿಂದೆ ಸುಸ್ಥಿತಿಯಲ್ಲಿದ್ದ ಅಂತರರಾಜ್ಯ ಸಂಪರ್ಕದ ರಸ್ತೆಯೂ ಆಗಿರುವ ಈ ಮಾರ್ಗ ಕ್ರಮೇಣ ನಿರ್ವಹಣೆಯ ಕೊರತೆಯಿಂದಾಗಿ ಹಾಳಾಗಿದೆ ಎಂದು ಸಾರ್ವಜನಿರು ಆಕ್ಷೇಪಿಸಿದ್ದಾರೆ.

ಕಳೆದ ಒಂದು ವರ್ಷದ ಹಿಂದಿನಿAದ ಸೂಕ್ತವಾಗಿ ನಿರ್ವಹಣೆ ಮಾಡಿದ್ದಲ್ಲಿ ಈಗಿನ ಹೀನಾಯ ಪರಿಸ್ಥಿತಿಗೆ ತಲುಪು ತ್ತಿರಲಿಲ್ಲ ಎಂಬದೂ ಜನರ ಅಭಿಪ್ರಾ ಯವಾಗಿದೆ. ರಸ್ತೆ ದುರವಸ್ಥೆಯಿಂದ ಲಘು ಹಾಗೂ ಭಾರೀ ವಾಹನಗಳಲ್ಲಿ ಓಡಾಡುವದೇ ಒಂದು ರೀತಿಯ ಪ್ರಯಾಸಕರ ರೀತಿಯ ಕಾರ್ಯಾ ಚರಣೆ ಎಂಬAತಾಗಿದ್ದು, ವಾಹನಗಳು ಕೂಡ ಅಲ್ಲಲ್ಲಿ ಗುಂಡಿಗೆ ಬಿದ್ದು ಹಾನಿಗೀಡಾಗುತ್ತಿವೆ ಎಂದು ಜನರು ಅಳಲು ತೋಡಿಕೊಳ್ಳುವಂತಾಗಿದೆ. ದಕ್ಷಿಣ ಕೊಡಗಿನಿಂದ ಜಿಲ್ಲಾ ಕೇಂದ್ರ ಮಡಿಕೇರಿಗೆ ಅಗತ್ಯ ಕೆಲಸ - ಕಾರ್ಯಗಳು, ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಜನರು ಹೆಚ್ಚಾಗಿ ಈ ಮಾರ್ಗವನ್ನು ಅವಲಂಬಿಸಲೇ ಬೇಕಾಗಿದೆ.

ಮಳೆಯ ಕಾರಣದಿಂದಾಗಿ ಗುಂಡಿಮುಚ್ಚುವ ಕೆಲಸ ಕೈಗೆತ್ತಿಕೊಳ್ಳಲು ಸಮಸ್ಯೆಯಾಗುತ್ತಿದೆ. ಲೋಕೋಪ ಯೋಗಿ ಇಲಾಖೆ ಇದಕ್ಕೆ ಸಿದ್ಧವಿದ್ದರೂ

ಈಗಿನ ಹವಾಮಾನದ ಪರಿಸ್ಥಿತಿ ಯಿಂದಾಗಿ ಅನಿವಾರ್ಯವಾಗಿ ಇದು ವಿಳಂಬವಾಗುತ್ತಿದೆ ಎಂಬದು ಇಲಾಖಾಧಿಕಾರಿಗಳ ಸಮಜಾಯಿಸಿಕೆಯಾಗಿದೆ.

ಈ ನಡುವೆ ಈ ರಸ್ತೆಯ ಮರುಡಾಂಬರೀಕರಣ ಕಾಮಗಾರಿಗೆ ರೂ. ೫ ಕೋಟಿ ಹಾಗೂ ರೂ. ೧ ಕೋಟಿಯ ಪ್ರತ್ಯೇಕ ಟೆಂಡರ್ ಕೂಡ ಆಗಿದ್ದು, ಈ ಟೆಂಡರ್ ಪ್ರಕ್ರಿಯೆ ಇದೀಗ ಪ್ರಗತಿಯಲ್ಲಿದೆ. ಟೆಂಡರ್‌ಗೆ ಸಂಬAಧಿಸಿದ ನಿಯಮಾವಳಿಗಳನ್ನು ಪೂರೈಸಬೇಕಾಗಿದ್ದು, ಸದ್ಯದ ಕೆಲವು ದಿನಗಳಲ್ಲಿ ಇದು ಅಂತಿಮವಾಗಲಿದೆ. ಇದಾದ ತಕ್ಷಣ ಮಳೆ ತುಸು ಇಳಿಮುಖವಾದೊಡನೆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಇಲಾಖಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಪ್ರಸ್ತುತ ಮಡಿಕೇರಿಯಿಂದ ಮೇಕೇರಿ ತನಕ ಕಾಂಕ್ರೀಟ್ ರಸ್ತೆ ಇದೆ. ಆದರೆ ಮೇಕೇರಿಯಿಂದ ವೀರಾಜಪೇಟೆ ತನಕವೂ ರಸ್ತೆ ತೀರಾ ಹಾನಿಗೀಡಾಗಿದೆ.