ಸೋಮವಾರಪೇಟೆ, ನ. ೧೯: ಇಲ್ಲಿನ ಪುಷ್ಪಗಿರಿ ಜೇಸಿ ಸಂಸ್ಥೆಯ ಅಧ್ಯಕ್ಷೆ ಮಾಯಾ ಗಿರೀಶ್ ಅವರು ವಲಯ ೧೪ರ ೨೦೨೨ನೇ ಸಾಲಿಗೆ ವಲಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಮಾನ್ಪೂ ಬೆಲ್ ಸಭಾಂಗಣದಲ್ಲಿ ನಡೆದ ವಲಯ ಸಮ್ಮೇಳನದಲ್ಲಿ ಈ ಆಯ್ಕೆ ನಡೆಯಿತು. ಸಂಸ್ಥೆಯ ಹಿರಿಯ ಸದಸ್ಯರಾದ ಮಮತ, ಉಷಾರಾಣಿ, ಲಕ್ಷಿö್ಮÃ, ಗಿರೀಶ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.