ಚೆಟ್ಟಳ್ಳಿ, ನ. ೧೯: ಪುತ್ತರಿ ಹಬ್ಬಕ್ಕೆ ಮುಂಚಿತವಾಗಿ ಪುತ್ತರಿ ಪಚ್ಯ (ಕುಕ್ಕೆ)ಯನ್ನು ಹೆಗಲ ಮೇಲೆ ಹೊತ್ತು ಮನೆಮನೆಗೆ ತಲುಪಿಸುವುದೇ ಮೇದರ ಅಚ್ಚುವಿನ ಕಾಯಕ..

ನಾಪೋಕ್ಲುವಿನ ಹಳೆತಾಲೂಕಿನ ಮೇದರ ಕುಟುಂಬದ ಅಚ್ಚು (ರಾಧ) ತನ್ನ ತಂದೆ ಹಾಗೂ ಕುಟುಂಬದ ವೃತ್ತಿಯನ್ನು ಪರಿಪಾಲಿಸಿಕೊಂಡು ಬರುತ್ತಿದ್ದಾರೆ. ಪುತ್ತರಿ ಹಬ್ಬದ ಮುಂಚಿತವಾಗಿ ವಾಟೆಗಳನ್ನು ಸಂಗ್ರಹಿಸಿ ತಂದು ಮನೆಯಲ್ಲಿ ಪುತ್ತರಿ ಪಚ್ಯವನ್ನು ತಯಾರಿಸಲಾಗುತ್ತಿದೆ. ಹಿಂದಿನ ಸಂಪ್ರದಾಯದAತೆ ಊರಿನತೆರಿಗೆ ನೀಡುವವರ ಮನೆಮನೆಗಳಿಗೆ ತೆರಳಿ ಪುತ್ತರಿ ಪಚ್ಯವನ್ನು ನೀಡಿ ಹಣಪಡೆಯಲಾಗುತ್ತಿತ್ತು. ಹಿಂದೆಲ್ಲ ಭತ್ತವನ್ನು ನೀಡುತಿದ್ದರಂತೆ. ಈ ಪುತ್ತರಿಪಚ್ಯ ಪುತ್ತರಿನಮ್ಮೆಯಲ್ಲಿ ಬಳಸಲ್ಪಡುತದೆ.

ಹಬ್ಬಕ್ಕೆ ಮುಂಚಿತವಾಗಿ ಈಡ್ ಸಂದರ್ಭದಲ್ಲಿ ಮೇದರ ಪರೆಯನ್ನು ನುಡಿಸುವ ಮೂಲಕ ಕೂಡ ಮೇದರ ಅಚ್ಚು ಪರೆಯ ಕೊಟ್ಟ್ನೊಂದಿಗೆ ಕಾಯಕವನ್ನು ಮುಂದುವರೆಸುತ್ತಿದ್ದಾರೆ.

-ಕರುಣ್ ಕಾಳಯ್ಯ