ಶ್ರೀಮಂಗಲ, ನ. ೧೯: ಹುದಿಕೇರಿಯ "ಅಂಜಿಕೇರಿ ನಾಡ್ ಕೂಟ"ದ ಸದಸ್ಯರುಗಳಿಂದ ಹುದಿಕೇರಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಗಾಡ್ರೇಜೊಂದನ್ನು ಕೊಡುಗೆಯಾಗಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಅಂಜಿಕೇರಿ ನಾಡ್ ಕೂಟದ ಅದ್ಯಕ್ಷ ಅಜ್ಜಿಕುಟ್ಟಿರ ಪ್ರಖ್ಯತ್ ಪೂಣಚ್ಚ, ಕಾರ್ಯದರ್ಶಿ ಚಂಗುಲAಡ ಅಯ್ಯಪ್ಪ, ನಿರ್ದೇಶಕರುಗಳಾದ ಚೆಕ್ಕೆರ ಚಂದ್ರಪ್ರಕಾಶ್, ಚಂಗುಲAಡ ಈಶ್ ಅಯ್ಯಪ್ಪ, ಚಂಗುಲAಡ ಪೊನ್ನಣ್ಣ, ಚೆಕ್ಕೆರ ಆದರ್ಶ್, ಚೆಕ್ಕೆರ ಆಕರ್ಶ್, ಕುಪ್ಪಣಮಡ ಸೂರಪ್ಪ, ಚೆಕ್ಕೆರ ವಿವೇಕ್, ಚಂಗುಲAಡ ಮಂದಣ್ಣ, ಚೆಕ್ಕೆರ ಬೊಪಣ್ಣ, ಬಯವಂಡ ಪೂವಣ್ಣ, ಶಾಲಾ ಮುಖ್ಯ ಶಿಕ್ಷಕಿ ಕೆ.ಎನ್. ರತ್ನಮ್ಮ, ಸಹಶಿಕ್ಷಕರುಗಳಾದ ಲೂಸಿ, ಸಿಂತಿಯಾ, ದೇವಯ್ಯ ಸಿ.ಎನ್, ದಿವ್ಯ ಎ.ಎನ್. ಪಾಲ್ಗೊಂಡಿದ್ದರು.